81
ಕೋಟ : ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಂಗ ಸಂಸ್ಥೆಯಾದ ಇನ್ನರ್‌ವೀಲ್ ಕ್ಲಬ್ ಕೋಟ ಸಾಲಿಗ್ರಾಮ ವತಿಯಿಂದ ಪರಿಸರದ ಪ್ರಖ್ಯಾತ ಮಕ್ಕಳ ತಜ್ಞ ಸಮುದಾಯ ಆರೋಗ್ಯ ಕೇಂದ್ರ ಕೋಟ ಇದರ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ| ಮಾಧವ ಪೈ ಇವರನ್ನು ಸಮುದ್ಯತಾ ಬ್ಯಾಂಕ್ವೆಟ್ ಹಾಲ್ ಕೋಟ ಇಲ್ಲಿ ನಡೆದ ಸಂಭ್ರಮದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ರೊ| ಪ್ರೊ. ಎಂ. ಬಾಲಕೃಷ್ಣ ಶೆಟ್ಟಿಯವರು ವೈದ್ಯದಿನಾಚರಣೆಯ ಬಗ್ಗೆ ಪ್ರಾಸ್ತಾವನೆ ನೀಡಿದರು ಅದೇ ರೀತಿ ಸನ್ಮಾನ ಪಡೆದಿರುವ ವೈದ್ಯಾಧಿಕಾರಿಯ ಕಾರ್ಯವೈಖರಿಯ ಬಗ್ಗೆ ಹೊಗಳಿ ಕೊಂಡಾಡಿದರು. ಆ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ನಮಿತ ನರಸಿಂಹ ಪ್ರಭು ವಹಿಸಿದ್ದರು. ಕಾರ್ಯದರ್ಶಿ ಪೂಜಾ, ಮಾಜಿ ಅಧ್ಯಕ್ಷೆ ಪುಷ್ಪಲತಾ ನಾÊರಿ ಹಾಗೂ ಕ್ಲಬ್‌ನ ಸದಸ್ಯರು ಭಾಗವಹಿಸಿದರು, ಕಾರ್ಯಕ್ರಮದ ನಿರ್ವಹಣೆಯನ್ನು ಗಾಯತ್ರಿ ಸಂತೋಷ್ ಹಾಗೂ ಅಮಿತಾ ಶೆಟ್ಟಿ ನಿರ್ವಹಿಸಿದರು.

