Home » ತಾಪಮಾನದ ಕಾಲಘಟ್ಟದಲ್ಲಿ ಗಿಡ ನಡುವ ಸಂಕಲ್ಪ ಮಾಡಿ
 

ತಾಪಮಾನದ ಕಾಲಘಟ್ಟದಲ್ಲಿ ಗಿಡ ನಡುವ ಸಂಕಲ್ಪ ಮಾಡಿ

- ರವೀಂದ್ರ ಕೋಟ

by Kundapur Xpress
Spread the love

ಕೋಟ: ಪರಿಸರ ಸಂರಕ್ಷಿಸು ಜವಾಬ್ದಾರಿ ಜತೆಗೆ ಪ್ರಸ್ತತ ಹೆಚ್ಚುತ್ತಿರುವ ತಾಪಮಾನಕ್ಕೆ ಪರ್ಯಾಯವಾಗಿ ಗಿಡ ನಡುವ ಸಂಕಲ್ಪ ಮಾಡಿ ಎಂದು ಪತ್ರಕರ್ತ ರವೀಂದ್ರ ಕೋಟ ಕರೆನೀಡಿದರು.
ಅವರು ಮಣಿಪಾಲದ ಪ್ರಗತಿನಗರದಲ್ಲಿರು ಸರಕಾರಿ ಐಟಿಐ ಕಾಲೇಜು ಇಲ್ಲಿ ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ಆಶ್ರಯದಲ್ಲಿ ವಿಶ್ವಪರಿಸರ ದಿನದ ಅಂಗವಾಗಿಹಮ್ಮಿಕೊಂಡ ಪರಿಸರಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ ಪ್ರಸ್ತುತ ದಿನಗಳಲ್ಲಿ ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಮನುಷ್ಯ ಪ್ರಕೃತಿಯನ್ನೆ ಮರೆತ್ತಿದ್ದಾನೆ.ಇದರಿಂದ ಸಾಕಷ್ಟು ಪಾಕೃತಿಕ ವಿಕೋಪಗಳು,ಕಾಲಕ್ಕೆ ತಕ್ಕಂತೆ ಬರುವ ಮಳೆ,ಗಾಳಿ,ಚಳಿ ಎಲ್ಲವು ಏರುಪೇರಾಗಿವೆ,ಈ ಬಗ್ಗೆ ಈಗಲೇ ಜಾಗೃತರಾಗದಿದ್ದರೆ ತಾಪಮಾನ 40ರಿಂದ 50ಕ್ಕೆ ಏರುವುದರಲ್ಲಿ ಸಂಶಯವಿಲ್ಲ ಇದಕ್ಕಾಗಿ ಇಂದಿನಿಂದಲೇ ಮೂರು ತಿಂಗಳುಗಳ ಕಾಲ ಗಿಡ ನಡುವ ಅದನ್ನು ಪೋಷಿಸುವ ಕಾರ್ಯ ಆಗಲಿ,ಯುವ ಸಮೂಹ ಸಂಘ ಸಂಸ್ಥೆಗಳ ಮೂಲಕ ಪರಿಸರಕ್ಕಾಗಿ ಸಮಯ ನಿಗದಿಪಡಿಸಿ ಅದಕ್ಕಾಗಿ ಕಾರ್ಯನಿರ್ವಹಿಸಲಿ ಎಂದರಲ್ಲದೆ ,ಪ್ಲಾಸ್ಟಿಕ್ ಪಿಡುಗಿನ ವಿರುದ್ಧ ಒಟ್ಟಾಗಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ,ಎಲ್ಲಿನೋಡಿದರಲ್ಲಿ ಪ್ಲಾಸ್ಟಿಕ್ ಮಯವಾಗಿದೆ ಇದಕ್ಕಾಗಿ ನಾವುಗಳು ಶ್ರಮಿಸಬೇಕಾದ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಇದೇ ವೇಳೆ ಪರಿಸರ ಜಾಗೃತಿ ಪ್ರತಿಜ್ಞಾವಿಧಿ ಭೋಧಿಸಿದರು.

ಐಟಿಐ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಗಣೇಶ್ ಭಟ್ ಶುಭಾಶಂಸನೆಗೈದರು.
ಇದೇ ವೇಳೆ ಕಾಲೇಜಿನ ಆವರಣದಲ್ಲಿ ಗಿಡ ನಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ರೋಟರಿಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿನೀತ್ ನಾಯಕ್, ರೋಟರಿ ಮಣಿಪಾಲ ಹಿಲ್ಸ್ ಕಾರ್ಯದರ್ಶಿ ಮಾಧವ ಮೈಯ್ಯ, ಸಂಯೋಜಕ ಮಧುಸೂದನ ಭಟ್,ರೋಟರಿ ಸದಸ್ಯರಾದ ಸುಂದರ್ ಶೆಟ್ಟಿ , ನಾರಾಯಣ ಭಟ್,ಮಾಲತಿ ರಾವ್, ಶ್ರೀಲತಾ ಮಯ್ಯ,ಚಂದ್ರಕಲಾ.ಆರ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ಅಧ್ಯಕ್ಷ ರಮಾನಂದ ಭಟ್  ಸ್ವಾಗತಿಸಿ ನಿರೂಪಿಸಿದರು.ರೋಟರಿ ಕ್ಲಬ್‍ನ ಗೋವಿಂದರಾಯ ಪೈ ವಂದಿಸಿದರು.

   

Related Articles

error: Content is protected !!