111
ಕೋಟ : ಜನಪದ ಕಲೆ ಹಾಗೂ ಸಂಸ್ಕ್ರತಿಯನ್ನು ಉಳಿಸಿ, ಬೆಳೆಸುತ್ತಿರುವ ಕಲಾವಿದರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಲಿ ಎಂದು ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಹೇಳಿದರು.
ಕೋಟ-ಸಾಲಿಗ್ರಾಮ ರೋಟರಿ ಕ್ಲಬ್ ವತಿಯಿಂದ ಸಾಲಿಗ್ರಾಮದ ಚಿತ್ರಪಾಡಿ ದೇಸೀಕೆರೆ ಜಗನ್ನಾಥ ಪೂಜಾರಿ ಅವರ ಮನೆಯಲ್ಲಿ ಸತ್ಯವತಿ ರಕೇಶ್ವರಿ ತುಳಸಿ ಪೂಜಾ ನೃತ್ಯ ತಂಡದ ಸಂಜೀವ ಪೂಜಾರಿ, ರಾಜು ಪೂಜಾರಿ, ಜಗನ್ನಾಥ ಪೂಜಾರಿ ಸೇರಿ 16 ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ರೋಟರಿಯ ಬಾಲಕೃಷ್ಣ ಶೆಟ್ಟಿ ಅವರು, ತುಳಸಿ ಪೂಜಾ ನೃತ್ಯ ತಂಡದ ಹಿನ್ನೆಲೆ, ನಡೆದು ಬಂದ ದಾರಿ ಕುರಿತು ಮಾಹಿತಿ ನೀಡಿದರು. ಕಿರಣ್ ಕುಂದರ್ ಸನ್ಮಾನ ಸ್ವೀಕರಿಸಿದವರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಮಾದವ ಪೂಜಾರಿ, ಅಚ್ಚುತ ಪೂಜಾರಿ, ಬಸವ ಪೂಜಾರಿ ಪಿ., ಬಸವ ಪೂಜಾರಿ ಇದ್ದರು. ರಾಜೇಂದ್ರ ಸುವರ್ಣ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಚಂದ್ರ ಪೂಜಾರಿ ವಂದಿಸಿದರು.ನಿಕಟಪೂರ್ವ ಅಧ್ಯಕ್ಷ ದೇವಪ್ಪ ಪಟಗಾರ್ ನಿರೂಪಿಸಿದರು

