ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ಮತ್ತು ಶ್ರೀ ಅನ್ನಪೂರ್ಣ ಸೇವಾ ಬಂದು ಕುಂದಾಪುರ ಹಾಗೂ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಕೆಎಂಸಿ ದಂತ ಮಹಾವಿದ್ಯಾಲಯದ ತಜ್ಞ ವೈದ್ಯರಿಂದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಕುಂದಾಪುರದ ಗಿಳಿಯಾರು ಕುಶಾಲ ಹೆಗ್ಡೆ ರೋಟರಿ ಸಭಾಭವನದಲ್ಲಿ ಏರ್ಪಡಿಸಲಾಯಿತು
ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ರೊ.ಸನಾತ್ ಕುಮಾರ್ ರೈ ಯವರು ಗಿಡಕ್ಕೆ ನೀರು ಏರೆಯುವ ಮುಖೇನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಅನ್ನಪೂರ್ಣ ಸೇವಾ ಬಂದು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಾಯಿನಾಥ್ ಶೇಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಹೆಸರಾಂತ ದಂತ ವೈದ್ಯರಾದ ರೊ.ರಾಜಾರಾಮ್ ಶೆಟ್ಟಿ ಹಾಗೂ ಕೆಎಂಸಿ ಡೆಂಟಲ್ ಆಸ್ಪತ್ರೆಯ ಡಾ. ಪ್ರಜ್ಞಾ ರವರು ಶಿಬಿರದ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು
ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ವೆಂಕಟೇಶ ನಾವುಂದ ಇವರು ನಿರಂತರ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತರನ್ನು ಗುರುತಿಸುವುದರೊಂದಿಗೆ ಅಧ್ಯಕ್ಷೀಯ ಭಾಷಣ ಮಾಡಿದರು ಕಾರ್ಯಕ್ರಮದಲ್ಲಿ ಕೆಎಂಸಿ ಡೆಂಟಲ್ ಆಸ್ಪತ್ರೆ ಮಣಿಪಾಲದ ಡಾಕ್ಟರ್ ಅನುಪಮ್ ಹಾಗೂ ರೋಟರಿ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು
ರೊ. ಪ್ರಕಾಶ್ ಚಂದ್ರ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ರೋಟರಿ ಕ್ಲಬ್ ನ ಕಾರ್ಯದರ್ಶಿ, ರೊ.ನಾಗರಾಜ್ ಶೆಟ್ಟಿ ಧನ್ಯವಾದವಿತ್ತರು 90 ಜನರು ಶಿಬಿರದ ಪ್ರಯೋಜನವನ್ನು ಪಡೆದರು