Home » ರೋಟರಿ ಕೋಟ ಸಿಟಿ ಪದಪ್ರದಾನ ಕಾರ್ಯಕ್ರಮ  
 

ರೋಟರಿ ಕೋಟ ಸಿಟಿ ಪದಪ್ರದಾನ ಕಾರ್ಯಕ್ರಮ  

by Kundapur Xpress
Spread the love

ಕೋಟ : ರೋಟರಿ ಕ್ಲಬ್ ಕೋಟ-ಸಿಟಿ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಜು.19ರಂದು ಬ್ರಹ್ಮಾವರದ ಆಶ್ರಯ ಹೋಟೆಲ್‌ನ ಆನಂದ್ ಬಾಂಕ್ಯಟ್ ಸಭಾಂಗಣದಲ್ಲಿ ಜರಗಿತು.

ಕ್ಲಬ್ ನ ನೂತನ ಅಧ್ಯಕ್ಷರಾಗಿ ಉದ್ಯಮಿ, ಕೋಟತಟ್ಟು ಗ್ರಾ.ಪಂ. ಸದಸ್ಯ ಪ್ರಕಾಶ್ ಹಂದಟ್ಟು, ಕಾರ್ಯದರ್ಶಿಯಾಗಿ ಕೋಡಿ ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ ಅಧಿಕಾರ ಸ್ವೀಕರಿಸಿದರು.

ಸಹಾಯಕ ಗವರ್ನರ್ ಶ್ಯಾಮ್‌ಸುಂದರ್ ನಾಯಿರಿ ಪದಪ್ರದಾನ ನೆರವೇರಿಸಿ ಮಾತನಾಡಿ, ರೋಟರಿ ಮೂಲಕ ನಿರಂತರ ಸಮಾಜ ಸೇವೆ ಸಾಧ್ಯವಿದೆ. ಕ್ಲಬ್ ನ ನೂತನ ಅಧ್ಯಕ್ಷ ಪ್ರಕಾಶ್ ಹಂದಟ್ಟು ಹಾಗೂ ಕಾರ್ಯದರ್ಶಿ ಕೃಷ್ಣ ಪೂಜಾರಿಯವರು ಗ್ರಾಮ ಪಂಚಾಯತ್ ಸದಸ್ಯರಾಗಿ ಸಾಕಷ್ಟು ಸಮಾಜಮುಖಿ ಸೇವೆಯಲ್ಲಿ ಈಗಾಗಲೇ ತೊಡಗಿಸುಕೊಂಡಿದ್ದಾರೆ. ಮುಂದೆ ರೋಟರಿ ಮೂಲಕ ಇವರ ಸೇವಾ ಕಾರ್ಯ ಮುಂದುವರಿಯಲಿದೆ ಎಂದರು. ಹಿರಿಯ ರೋಟರಿ ಸದಸ್ಯರಾದ ಸತೀಶ್ ಶೆಟ್ಟಿ ಕ್ಲಬ್ ನ ಕಾರ್ಯಚಟುವಟಿಕೆಗೆ ಶುಭ ಹಾರೈಸಿದರು.

ಈ ಸಂದರ್ಭ ಸ್ಥಳೀಯ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಾಜಿ ಸಹಾಯಕ ಗವರ್ನರ್ ಹದ್ದೂರು ಮಮತಾ ಶೆಟ್ಟಿ ಅವರನ್ನು ಗೌರವಿಸಲಾಯಿತು. ವಲಯ ಸೇನಾನಿ ರವೀಂದ್ರ ಶೆಟ್ಟಿ ಹಾಗೂ ಹಿಂದಿನ ಸಾಲಿನ ಅಧ್ಯಕ್ಷ ಅನಿಲ್ ಸುವರ್ಣ, ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ದಯಾನಂದ ಆಚಾರ್ಯ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ವರದಿ ವಾಚಿಸಿದರು. ಶಿವಾನಂದ ನಾಯರಿ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!