Home » ರೋಟರಿ ಕ್ಲಬ್‌ ಕುಂದಾಪುರ ದಕ್ಷಿಣ ಅಧ್ಯಕ್ಷ ಸಚಿನ್ ನಕ್ಕತ್ತಾಯ ತಂಡದ ಪದಗ್ರಹಣ
 

ರೋಟರಿ ಕ್ಲಬ್‌ ಕುಂದಾಪುರ ದಕ್ಷಿಣ ಅಧ್ಯಕ್ಷ ಸಚಿನ್ ನಕ್ಕತ್ತಾಯ ತಂಡದ ಪದಗ್ರಹಣ

by Kundapur Xpress
Spread the love

ಕುಂದಾಪುರ :ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಂಡಾರ್‌ಕಾರ್ಸ್ ಕಾಲೇಜಿನ ರಾಧಾಬಾಯಿ ವೆಂಕಟರಮಣ ಪ್ರಭು ರಂಗಮಂದಿರದಲ್ಲಿ ನಡೆಯಿತು. ಅಧ್ಯಕ್ಷ ಸಚಿನ್ ನಕ್ಕತ್ತಾಯ ಹಾಗೂ ಅವರ ತಂಡದವರು ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ನೆರವೇರಿಸಿದ ರೋಟರಿ ಪ್ರಾದೇಶಿಕ ಸಾರ್ವಜನಿಕ ಚಿತ್ರಣ ಸಂಯೋಜಕ, ಉದ್ಯಮಿ ಅಭಿನಂದನ್ ಎ. ಶೆಟ್ಟಿ, ಜಾಗತಿಕ ಶಾಂತಿಗೆ ರೋಟರಿಯ ನಿರಂತರ ಕೊಡುಗೆಯನ್ನು ಸ್ಮರಿಸಿದರು.

ಡಾ| ನಿರಂಜನ್ .ಎ. ರಾವ್ ಮಾತನಾಡಿ, ಹಕ್ಕು ಮತ್ತು ಕರ್ತವ್ಯಗಳು ಜತೆಯಾಗಿರುತ್ತವೆ. ಹಕ್ಕುಗಳನ್ನು ಪ್ರತಿಪಾದಿಸುವ ನಾವು ಕರ್ತವ್ಯಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. ನೆಲ, ಜಲ, ಪ್ರಾಣಿ ಮತ್ತು ಸಸ್ಯ ಸಂಕುಲ ಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿ ಇಡಬೇಕಾದ ಅಮೂಲ್ಯ ಸಂಪತ್ತು. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.

ಸಹಾಯಕ ಗವರ್ನರ್ ನಾರಾಯಣ್, ವಲಯ ಲೆಫ್ಟಿನೆಂಟ್ ಕೌಶಿಕ್ ಯಾಡಿಯಾಳ್‌ ಉಪಸ್ಥಿತರಿದ್ದರು.

ಕಾರ್ಯದರ್ಶಿಯಾಗಿ ಜೆರಾಲ್ಡ್ . ಕ್ರಾಸ್ಟೋ ಅಧಿಕಾರ ಸ್ವೀಕರಿಸಿದರು. ಕ್ಲಬ್ ವತಿಯಿಂದ ಚೈತನ್ಯ ವಿಶೇಷ ಶಾಲೆಗೆ 10 ಸಾವಿರ ರೂ. ಮೌಲ್ಯದ ಚೆಕ್ ಹಸ್ತಾಂತರಿ ಸಲಾಯಿತು.

ನಿರ್ಗಮನ ಅಧ್ಯಕ್ಷೆ  ಜುಡಿತ್ ಮೆಂಡೋನ್ಸಾ ಸ್ವಾಗತಿಸಿ, ಕಾರ್ಯದರ್ಶಿ ಭರತ್ ಶೆಟ್ಟಿ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು.

 

Related Articles

error: Content is protected !!