Home » ಕುಂದಾಪುರದಲ್ಲಿ ಆರೆಸ್ಸೆಸ್ ಸ್ವಯಂ ಸೇವಕರು ಪಥಸಂಚಲನ
 

ಕುಂದಾಪುರದಲ್ಲಿ ಆರೆಸ್ಸೆಸ್ ಸ್ವಯಂ ಸೇವಕರು ಪಥಸಂಚಲನ

by Kundapur Xpress
Spread the love

ಕುಂದಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭ  ಕುಂದಾಪುರದಲ್ಲಿ ಆರೆಸ್ಸೆಸ್ ಸ್ವಯಂ ಸೇವಕರು ಪಥಸಂಚಲನ ನಡೆಸಿದರು ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ಮೈದಾನದಲ್ಲಿ ಸೇರಿದ ಗಣವೇಷಧಾರಿಗಳು ಸಂಘದ ಭಗವಾಧ್ವಜಕ್ಕೆ ವಂದನೆ ಸಲ್ಲಿಸಿದರು. ಬಳಿಕ ಪಥಸಂಲನದ ಮೂಲಕ ಪೇಟೆ ವೆಂಕಟರಮಣ ದೇವಸ್ಥಾನದ ಸಮೀಪವಾಗಿ ಕುಂದಾಪುರದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಪಾರಿಜಾತ ವೃತ್ತದ ಮೂಲಕ ಸಾಗಿ ಮತ್ತೆ ವೆಂಕಟರಮಣ ಶಾಲೆಯ ಮೈದಾನದಲ್ಲಿ ಪಥಸಂಲನ ಮುಕ್ತಾಯಗೊಳಿಸಿದರು.ಈ ಸಂದರ್ಭ ಕುಂದಾಪುರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಅವರು ಆರೆಸ್ಸೆಸ್ ಸಮವಸ್ತ್ರ ಧರಿಸಿ ಗಣವೇಷಧಾರಿಯಾಗಿ ಎಲ್ಲರೊಂದಿಗೆ ಪಥಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕುಂದಾಪುರ ಪುರಸಭೆಯ ಅಧ್ಯಕ್ಷ ಮೊಹನದಾಸ್‌ ಶೆಣೈ, ರಾಜೇಶ್ ಕಾವೇರಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್, ವಕೀಲ ಕೆ. ಬಾಲಕೃಷ್ಣ ಶೆಟ್ಟಿ, ಸುಬ್ರಹ್ಮಣ್ಯ ಹೊಳ್ಳ ಮೊದಲಾದ ಆರೆಸ್ಸೆಸ್ ಹಿರಿಯರು ಸೇರಿದಂತೆ ಸುಮಾರು ಆರು ನೂರಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸಿದ್ದರು. ಕುಂದಾಪುರ ತಾಲೂಕು ಕಾರ್ಯವಾಹ ಸತ್ಯನಾರಾಯಣ ಮಂಜ ಪಥಸಂಚಲನ ನಡೆಸಿಕೊಟ್ಟರು.

 

Related Articles

error: Content is protected !!