ಕುಂದಾಪುರ : ರಾಜ್ಯದಾದ್ಯಂತ ಪಹಣಿ ಖಾತೆಯೊಂದಿಗೆ ಆಧಾರ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು ಸರಕಾರದ ಅಧಿಸೂಚನೆಯಂತೆ ಜುಲೈ 31 ಕೊನೆಯ ದಿನಾಂಕವಾಗಿತ್ತು. ಆದರೆ ಇದೀಗ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಆಧಾರ್ ಜೋಡಣೆಗೆ ಆಗಸ್ಟ್ 17 ಕೊನೆಯ ದಿನಾಂಕವನ್ನಾಗಿ ವಿಸ್ತರಿಸಲಾಗಿದೆ ಎಂದು ಕುಂದಾಪುರ ತಹಸಿಲ್ದಾರ್ ಶ್ರೀಮತಿ ಶೋಭಾ ಲಕ್ಷ್ಮಿ ತಿಳಿಸಿದ್ದಾರೆ
ಗ್ರಾಮೀಣ ಭಾಗಗಳಲ್ಲಿ ತಂತ್ರಾಂಶದ ಅಡಚಣೆಯಿಂದಾಗಿ ಪಹಣಿಗೆ ಆಧಾರ ಸಂಖ್ಯೆಯನ್ನು ಜೋಡಿಸುವಲ್ಲಿ ವಿಳಂಬವಾಗುತ್ತಿದ್ದು ಇದನ್ನು ಮನಗಂಡ ತಹಸಿಲ್ದಾರ್ ಕೊನೆಯ ದಿನಾಂಕವನ್ನು ಆಗಸ್ಟ್ 17ನೇ ತಾರೀಖಿನವರೆಗೆ ವಿಸ್ತರಿಸಿದ್ದಾರೆ. ಪಹಣೆ ಅಥವಾ ಆರ್.ಟಿ.ಸಿ ಗೆ ಆಧಾರ ಜೋಡಣೆಯಿಂದ ಅಕ್ರಮ ಪಹಣಿ ನೋಂದಣಿಯನ್ನು ತಪ್ಪಿಸಬಹುದು. ಅಲ್ಲದೆ ಸರ್ಕಾರದಿಂದ ಕೃಷಿಗೆ ಸಂಬಂಧಪಟ್ಟ ಇ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ತಹಶೀಲ್ದಾರ್ ಶ್ರೀಮತಿ ಶೋಭಾ ಲಕ್ಷ್ಮಿ ಹೇಳಿದ್ದಾರೆ.