Home » ಶ್ರೀ  ಮೈಲಾರೇಶ್ವರ ಯುವಕ ಮಂಡಲ : ಸಂಭ್ರಮದ ವಾರ್ಷಿಕೋತ್ಸವ
 

ಶ್ರೀ  ಮೈಲಾರೇಶ್ವರ ಯುವಕ ಮಂಡಲ : ಸಂಭ್ರಮದ ವಾರ್ಷಿಕೋತ್ಸವ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ಯುವಕ ಮಂಡಲದ 48ನೇ ವಾರ್ಷಿಕೋತ್ಸವ ಸಮಾರಂಭವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಿತು

ಶಿವರಾತ್ರಿಯಂದು ಬೆಳಿಗ್ಗೆ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಹೂವಿನ ಅಲಂಕಾರ ದೀಪಾಲಂಕಾರ ಹಾಗೂ ಶತರುದ್ರಾಭೀಷೇಕ ನಡೆದು ಮಧ್ಯಾಹ್ನ 01.00 ಗಂಟೆಗೆ ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆಯಾಯಿತು

ಸಂಜೆ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಧರ್‌ ಪಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಸನ್ನಿಧಿ ಟ್ರಾವೆಲ್ಸ್‌ ಇದರ ಪಾಲುದಾರರಾದ ಶ್ರೀ ಸತೀಶ್‌ ಶೆಟ್ಟಿ ಮೈಲಾರೇಶ್ವರ ದೇಗುಲದ ಆಡಳಿತಾಧಿಕಾರಿಗಳಾದ ಕಾಂತರಾಜ್‌ ಗಿರೀಶ್‌ ಜಿ ಕೆ, ಶ್ರೀಮತಿ ಗೀತಾ ರವೀಂದ್ರ ಕೆ ಜಿ ಮೈಟಿ ಇನ್ಪ್ರಾದ ಮಾಲಕರಾದ ಶಮಂತ್‌ ಕುಮಾರ್‌ ಆಗಮಿಸಿದ್ದರು

ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಅಭಿನಂದನ್‌ ಶೆಟ್ಟಿ, ಉದಯ್‌ ಕುಮಾರ್‌ ಹಟ್ಟಿಯಂಗಡಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಎನ್‌ ಕರುಣಾಕರ ಶೆಟ್ಟಿ ಹಾಗೂ ಭಜನಾ ಗುರುಗಳಾದ ಜಯಕರ ಪೂಜಾರಿಯವರನ್ನು ಸನ್ಮಾನಿಸಲಾಯತು ವೇದಿಕೆಯಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಜಿ ಆರ್‌ ಪ್ರಕಾಶ್‌ ಅಧ್ಯಕ್ಷರಾದ ಶರತ್‌ ಕುಮಾರ್‌ ಕಾರ್ಯದರ್ಶಿ ಶ್ರೀನಾಥ್‌ ಕೋಟೆ ಉಪಸ್ಥಿತರಿದ್ದರು

ಡಿ ಕೆ ಪ್ರಭಾಕರ್‌ ಡಿ.ಸತೀಶ್‌ ವರದರಾಜ್‌ ಪೈ ಹಾಗೂ ಕೆ ಪಿ ಸುಧೀರ್‌ ನಿರೂಪಿಸಿದ ಕಾರ್ಯಕ್ರಮದಲ್ಲಿ ಗಣೇಶ್‌ ನಾಯ್ಕ್‌ ವರದಿ ಮಂಡಿಸಿ ಶರತ್‌ ಕುಮಾರ್ ಸ್ವಾಗತಿಸಿ ಶ್ರೀನಾಥ್‌ ಕೋಟೆ ಧನ್ಯವಾದವಿತ್ತರು ಸಂಘದ ಸದಸ್ಯ ವೆಂಕಟೇಶ್‌ ಗುಲ್ವಾಡಿ ಹಾಗೂ ಸದಸ್ಯರು  ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು

 

Related Articles

error: Content is protected !!