ಕುಂದಾಪುರ : ನಗರದ ಶ್ರೀ ಮೈಲಾರೇಶ್ವರ ಯುವಕ ಮಂಡಲವು ತನ್ನ 47ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಆದಿತ್ಯವಾರ ಚಿಕ್ಕಮ್ಮನ ಸಾಲು ರಸ್ತೆಯ ಬಗಳಾಂಬ ತಾಯಿ ದೇವಸ್ಥಾನದ ಬಳಿಯ ಮೈದಾನದಲ್ಲಿ ಸಾಂಸ್ಕೃತಿಕ ಕ್ರೀಡಾಕೂಟದ ಉಧ್ಘಾಟಿನೆ ನೆರವೇರಿತು

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಗಬೊಬ್ಬರ್ಯ ಹೈಗುಳಿ ಹಾಗೂ ಸಪರಿವಾರ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಕೆ ವಿ ಅಣ್ಣಪ್ಪರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಗುತ್ತಿಗೆದಾರರಾದ ಗಿರೀಶ್ ಕೆ ಲಕ್ಷ್ಮೀ ವೆಂಕಟೇಶ್ವರ ಸ್ಟೋರ್ಸ್ ಮಾಲಕರಾದ ದೇವದಾಸ ಮಲ್ಯ ಕಾವೇರಿ ಭವನದ ಗುರುರಾಜ್ ಆಗಮಿಸಿದ್ದರು ಎಸ್ ವಿ ಎಂಟರ್ ಪ್ರೈಸಸ್ ಮಾಲಕರಾದ ಕರುಣಾಕರ ಪ್ರಭು ಶುಭಾಶಂಷನೆ ಗೈದರು
ವೇದಿಕೆಯಲ್ಲಿ ಗೌರವ ಅಧ್ಯಕ್ಷರಾದ ಸುಧೀರ್ ಕ್ರೀಡಾ ಕಾರ್ಯದರ್ಶಿಗಳಾದ ಕೆ ಜಿ ಸಚ್ಚಿದಾನಂದ ಸಾಂಸ್ಕ್ರತಿಕ ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು
ಡಿ ಸತೀಶ್ ಹಾಗೂ ವರದಾ ಪೈ ನಿರೂಪಿಸಿದ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ಸ್ವಾಗತಿಸಿ ಕಾರ್ಯದರ್ಶಿ ಮಧುಕರ್ ವಂದಿಸಿದರು ಬಾಲಚಂದ್ರ ಕಂಚುಗಾರ್ ಪ್ರಾರ್ಥಿಸಿದರು

