ಕೋಟ : ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಮಸ್ತೆ ದಿನಾಚರಣೆ ಕಾರ್ಯಕ್ರಮವನ್ನು ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು.
ಇದೇ ವೇಳೆ ಪಟ್ಟಣ ಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ನಮಸ್ತೆ ಯೋಜನೆಯ ಗುರಿ, ಉದ್ದೇಶಗಳನ್ನು, ನಗರ ಸ್ಥಳೀಯ ಸಂಸ್ಥೆಯಲ್ಲಿನ ಸೆಪ್ಟಿಕ್ ಟ್ಯಾಂಕ್ ಸುಚಿಗೊಳಿಸುವ ಕಾರ್ಮಿಕರಿಗೆ ಮತ್ತು ನಾಗರೀಕರಿಗೆ ಪ್ರೊಜೆಕ್ಟರ್ ಮುಖಾಂತರ ಅರಿವು ಮೂಡಿಸುವ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ನಮಸ್ತೆ ಯೋಜನೆಯಡಿ ಈಗಾಗಲೇ ಅನುಮೋದನೆಯಾಗಿರುವ ಆಯುಷ್ಮಾನ್ ಭಾರತ್ ಕಾರ್ಡ್ನ್ನು ಫಲಾನುಭವಿಗಳಿಗೆ ,ಸ್ವಚ್ಛತಾ ಕೆಲಸದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸ್ವಚ್ಚತಾ ಸಿಬ್ಬಂದಿಯವರಿಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಪಟ್ಟಣ ಪಂಚಾಯತ್ ವತಿಯಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್‌ನ ಉಪಾಧ್ಯಕ್ಷರಾದ ಗಿರಿಜಾ ಪೂಜಾರಿ ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನುಸೂಯ ಹೇರ್ಳೆ, ಮತ್ತು ಸದಸ್ಯರಾದ ಸಂಜೀವ ದೇವಾಡಿಗ, ಸುಲತಾ ಹೆಗ್ಡೆ ಇದ್ದರು. ಬಿಲ್ ಕಲೆಕ್ಟರ್ ಚಂದ್ರಶೇಖರ ಸೋಮಾಯಾಜಿ ಸ್ವಾಗತಿಸಿ ವಂದಿಸಿದರು

