ಕೋಟ : ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಸಾಲಿಗ್ರಾಮ ಘಟಕ ಹಾಗೂ ಮಹಿಳಾ ಸಂಘಟನೆ ಸಾಲಿಗ್ರಾಮ ಇವರ ಆಶ್ರಯದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ,ಕರಾವಳಿ ಮೊಗವೀರ ಮಹಾಜನ ಸಂಘ ಗುಂಡ್ಮಿ-ಸಾಲಿಗ್ರಾಮ, ರಕ್ತನಿಧಿ ಕೆ.ಎಮ್.ಸಿ. ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಕಾರದಲ್ಲಿ, ಮೊಗವೀರ ಗ್ರಾಮ ಸಭಾ ಆಲಿತೋಟ-ಗುಂಡ್ಮಿ,ಗಾಣಿಗ ಯುವ ಸಂಘಟನೆ,ಕೋಟ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಕರಾವಳಿ ಮೊಗವೀರ ಸಭಾಭವನ ಗುಂಡ್ಮಿ ಸಾಲಿಗ್ರಾಮ ಭಾನುವಾರ ನಡೆಯಿತು. ಶಿಬಿರವನ್ನು ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ ಅಮೀನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಸಾಲಿಗ್ರಾಮ ಘಟಕದ ಕಿರಣ ಕುಂದರ್ ವಹಿಸಿದ್ದರು. ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಮೊಗವೀರ ಸಂಘ ಸಭಾ ಅಧ್ಯಕ್ಷ ಸತೀಶ್ ಅಮೀನ್ ಬಾರಕೂರು,ಕೆ. ಎಮ್. ಸಿ. ಮಣಿಪಾಲ ವೈದ್ಯಕೀಯ ನಿರ್ದೇಶಕ ಡಾ. ಕಾರ್ತಿಕ್, ಕರಾವಳಿ ಮೊಗವೀರ ಮಹಾಜನ ಸಂಘ ಕಾರ್ಯದರ್ಶಿ ಕೃಷ್ಣಮೂರ್ತಿ ಮರಕಾಲ, ಮೊಗವೀರ ಗ್ರಾಮ ಸಭಾ ಆಲಿತೋಟ-ಗುಂಡ್ಮಿ ಅಧ್ಯಕ್ಷ ರಾಜು ಅಮೀನ್, ಕೋಟ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಿರೀಶ್ ಗಾಣಿಗ, ಮೊಗವೀರ ಯುವ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ,ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಪುತ್ರನ್, ಸಾಲಿಗ್ರಾಮ ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ವಿಜಯ ಕಾಂಚನ್,ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರಾದ ಮತ್ತು ಸಾಲಿಗ್ರಾಮ ಘಟಕದ ಉಸ್ತುವಾರಿ ಪ್ರೇಮ ಬಂಗೇರ ,ಜಿಲ್ಲಾ ಸಂಘದ ಉಪಾಧ್ಯಕ್ಷ ರವೀಶ್ ಕೊರವಡಿ, ಶ್ರೀ ಕುಲಮಹಸ್ತ್ರಿ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಕೋಶಾಧಿಕಾರಿ ಶಂಕರ ಸಾಲಿಯಾನ್ , , ಬಾರಕೂರು ಮೊಗವೀರ ಸಂ.ಸಭಾ ಕಾರ್ಯದರ್ಶಿ ಮಂಜುನಾಥ ಸುವರ್ಣ, ಜಿಲ್ಲಾ ಸಂಘಟನೆಯ ಪ್ರಮುಖರಾದ ಕಿಟ್ಟಪ್ಪ ಅಮೀನ್ ,ಮೊಗವೀರ ಯು.ಸಂ.ಸಾಲಿಗ್ರಾಮದ ಮಾಜಿ ಅಧ್ಯಕ್ಷ ಸುರೇಶ ಮರಕಾಲ,ಸತೀಶ್ ಮರಕಾಲ,ಮಾಜಿ ಮಹಿಳಾ ಅಧ್ಯಕ್ಷೆ ಗಿರಿಜಾ ಸುವರ್ಣ, ಮಹಿಳಾ ಘಟಕದ ಕಾರ್ಯದರ್ಶಿ ರೇವತಿ ರಾಜ್ ಉಪಸ್ಥಿತರಿದ್ದರು. ಸಾಲಿಗ್ರಾಮ ಘಟಕದ ನಿಕಟಪೂರ್ವ ಅಧ್ಯಕ್ಷ ಚಂದ್ರ ಬಂಗೇರ ಸ್ವಾಗತಿಸಿ,ರಾಜು ಪಾರಂಪಳ್ಳಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಜಗನ್ನಾಥ ಅಮೀನ್ ಪ್ರಾರ್ಥಿಸಿ ಧನ್ಯವಾದ ಸಮರ್ಪಿಸಿದರು. ಶಿಬಿರದಲ್ಲಿ 105 ಯನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಲಾಯಿತು.