ಕೋಟ : ಪ್ರಕೃತಿ ಸಂಜೀವಿನಿ ಒಕ್ಕೂಟಕ್ಕೆ ತಾಲೂಕಿನ ಮಾದರಿ ಒಕ್ಕೂಟ ಎಂಬ ಗೌರವ ದಕ್ಕಿದೆ ಇದು ಸಂಜೀವಿನಿ ಸಂಘದ ಯಶಸ್ಸಿನ ಜೋತಕವಾಗಿದೆ ಎಂದು ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ಹರ್ಷ ವ್ಯಕ್ತಪಡಿಸಿದರು.
ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಕೋಟ ಗ್ರಾಮಪಂಚಾಯತ್ ನ ಪ್ರಕೃತಿ ಸಂಜೀವಿನಿ ಒಕ್ಕೂಟದ ಇದರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಒಕ್ಕೂಟದ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ಪಡೆದುಕೊಂಡಾಗ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ಈ ನಿಟ್ಟಿನಲ್ಲಿ ನಮ್ಮ ಒಕ್ಕೂಟವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಸ್ವಾವಲಂಬಿ ಮಹಿಳೆಯರಾಗಿ ಹೊರ ಹೊಮ್ಮಲು ವೇದಿಕೆ ಕಲ್ಪಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಸೇವೆಯಿಂದ ನಿವೃತ್ತಗೊಳ್ಳಲಿರುವ ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಇವರನ್ನು ಸನ್ಮಾನಿಸಲಾಯಿತು.
ಕೃಷಿ ಹಾಗೂ ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧನೆಗೈದ ಒಕ್ಕೂಟದ ಜಯಲಕ್ಷ್ಮೀ ಗಿಳಿಯಾರು ಸಾಧಕ ಮಹಿಳಾ ಗೌರವ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಉದ್ಘಾಟಿಸಿದರು. ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ವಹಿಸಿದ್ದರು.
ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ ಮಾಧವ ಪೈ ಮಹಿಳೆಯರಿಗೆ ತಲೆದೂರವ ಆರೋಗ್ಯ ಸಂಬAಧಿತ ವಿಷಯಗಳ ಬಗ್ಗೆ ವಿವಿರವಾಗಿ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಕೋಟ ಪಶು ಆಸ್ಪತ್ರೆ ವೈದ್ಯಾಧಿಕಾರಿ ಅನಿಲ್ ಕುಮಾರ್ ಭಾಗವಹಿಸಿದರು.
ಮುಖ್ಯ ಅಭ್ಯಾಗತರಾಗಿ ಸಂಜೀವಿನಿ ಒಕ್ಕೂಟಗಳ ತಾಲೂಕು ಸಮಿತಿ ಅಧ್ಯಕ್ಷೆ ಕಲಾವತಿ ಅಶೋಕ್,ಪಂಚಾಯತ್ ಕಾರ್ಯದರ್ಶಿ ಶೇಖರ್,ಬ್ರಹ್ಮಾವರ ತಾಲೂಕು ಪಂಚಾಯತ್ ನರೇಗಾ ಯೋಜನೆಯ ಸಂಯೋಜಕ ಅಕ್ಷಯ ಕೃಷ್ಣ,ಕೋಟ ಆರಕ್ಷಕ ಠಾಣೆಯ ಎ.ಎಸ್ ಐ ರವಿ ಕುಮಾರ್ ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟದ ಕ್ಲಸ್ಟರ್ ಸುಪರ್ ವೈಸರ್ ಸ್ವಾತಿ ಮಹಾಸಭೆಯ ಪ್ರಾಸ್ತಾವನೆ ಸಲ್ಲಿಸಿದರು. ಒಕ್ಕೂಟದ ಕಾರ್ಯದರ್ಶಿ ಪವಿತ್ರಾ ವರದಿ ವಾಚಿಸಿದರು.
ಪಶು ಸಖಿ ರೇಷ್ಮಾ ಸ್ವಾಗತಿಸಿದರು. ಕೃಷಿ ಸಖಿ ಮಮತಾ ವಂದಿಸಿದರು. ಕಾರ್ಯಕ್ರಮವನ್ನು ಸಂಜೀವಿನಿ ಸಂಘದ ಎಲ್ ಸಿ ಆರ್ ಪಿ ಭಾರತಿ ನಿರೂಪಿಸಿದರು. ಎಂ.ಬಿಕೆ ಪ್ರೇಮಾ ಜಮಾ ಕರ್ಚಿನ ವಿವರವನ್ನು ವಾಚಿಸಿದರು.

