Home » ಸಮಾಜದ ಬಗೆಗಿನ ಕಳಕಳಿಯನ್ನು ಮೆರೆದವರು ವಿಠ್ಠಲ್ ಶೆಟ್ಟಿ ಕೊರ್ಗಿ
 

ಸಮಾಜದ ಬಗೆಗಿನ ಕಳಕಳಿಯನ್ನು ಮೆರೆದವರು ವಿಠ್ಠಲ್ ಶೆಟ್ಟಿ ಕೊರ್ಗಿ

ಗುರು ಲಂಬೋದರ ಹೆಗಡೆ ನಿಟ್ಟೂರು

by Kundapur Xpress
Spread the love

ಕೋಟ : ಪರಿಸರವನ್ನು ಹಸಿರಾಗಿಸುವ ಕಾಳಜಿಯನ್ನು ಹೊಂದಿರುವುದಲ್ಲದೇ, ದುಡಿಮೆಯ ಧನದಿಂದ ಪ್ರಾಣಿ ಪಕ್ಷಿಗಳಿಗೆ ಆಸೆರೆಯಾಗಿರುವ ಕೊರ್ಗಿ ವಿಠ್ಠಲ ಶೆಟ್ಟಿಯವರು ಸಮಾಜದ ಅನೇಕ ಸತ್ಕಾರ್ಯಗಳಲ್ಲಿ ಮುಂದಾದವರು. ತನ್ನ ಟ್ರಸ್ಟ್ ಮೂಲಕ ಅನೇಕ ಅನಾರೋಗ್ಯ ಪೀಡಿತರಿಗೆ ನೆರವಾದವರು. ತನ್ನ ವಿವಾಹ ಮಹೋತ್ಸವದ ಸಂದರ್ಭಗಳಲ್ಲೂ ಅನ್ನದಾನದ ಜೊತೆಗೆ ಅನೇಕ ಅಶಕ್ತರಿಗೂ, ವಿದ್ಯಾರ್ಥಿಗಳಿಗೂ ನೆರವಾಗುವ ಮೂಲಕ ಸಮಾಜದ ಬಗೆಗಿನ ಕಳಕಳಿಯನ್ನು ಮೆರೆದಿದ್ದಾರೆ. 25ನೇ ವಸಂತವನ್ನು 108 ಕಾರ್ಯಕ್ರಮಗಳನ್ನು ಪೂರೈಸಿಕೊಳ್ಳುವಲ್ಲಿ ಯಶಸ್ವೀ ಕಲಾವೃಂದಕ್ಕೆ ತನ್ನ ಐವತ್ತರ ಸಂಭ್ರಮದಲ್ಲಿ ಕಾರ್ಯಕ್ರಮವೊಂದನ್ನು ನೀಡಿ ಕಲಾ ಸಂಸ್ಥೆಗೂ ನೆರವಾದ ಮಹನೀಯರು ಎಂದು ವಿಠ್ಠಲ ಶೆಟ್ಟಿ ದಂಪತಿಗಳನ್ನು ಗೌರವಿಸಿ ಗುರು ಲಂಬೋದರ ಹೆಗಡೆ ಮಾತನ್ನಾಡಿದರು.
ಕುಂದಾಪುರ ಸಹನಾ ಅಡಿಟೋರಿಯಂನಲ್ಲಿ ಮೇ, 23ರಂದು ಐವತ್ತರ ಸಂಭ್ರಮವನ್ನು ನೆರವೇರಿಸಿಕೊಂಡ ಸಂದರ್ಭದಲ್ಲಿ ಯಶಸ್ವೀ ಕಲಾವೃಂದದ ಕಲಾವಿದರಿಂದ ‘ಯಕ್ಷ ಗಾನ ವೈಭವ’ ಪೂರೈಸಿದ ಬಳಿಕ ಗಣ್ಯರನ್ನು ಗೌರವಿಸಿ ಲಂಬೋದರ ಹೆಗಡೆ ಮಾತನ್ನಾಡಿದರು.
ಖ್ಯಾತ ಮದ್ದಲೆ ವಾದಕರಾದ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯ ರಾಹುಲ್ ಕುಂದರ್ ಕೋಡಿ, ಪಂಚಮಿ ವೈದ್ಯ ತೆಕ್ಕಟ್ಟೆ, ಕಿಶನ್ ಪೂಜಾರಿ ಕುಂದಾಪುರ ಉಪಸ್ಥಿತರಿದ್ದರು.

ಕುಂದಾಪುರ ಸಹನಾ ಅಡಿಟೋರಿಯಂನಲ್ಲಿ ಮೇ, 23ರಂದು ಐವತ್ತರ ಸಂಭ್ರಮವನ್ನು ನೆರವೇರಿಸಿಕೊಂಡ ಸಂದರ್ಭದಲ್ಲಿ ಯಶಸ್ವೀ ಕಲಾವೃಂದದ ಕಲಾವಿದರಿಂದ ‘ಯಕ್ಷ ಗಾನ ವೈಭವದಲ್ಲಿ ಪರಿಸರವಾದಿ ವಿಠ್ಠಲ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಖ್ಯಾತ ಮದ್ದಲೆ ವಾದಕರಾದ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯ ರಾಹುಲ್ ಕುಂದರ್ ಕೋಡಿ, ಪಂಚಮಿ ವೈದ್ಯ ತೆಕ್ಕಟ್ಟೆ, ಕಿಶನ್ ಪೂಜಾರಿ ಕುಂದಾಪುರ ಉಪಸ್ಥಿತರಿದ್ದರು.

   

Related Articles

error: Content is protected !!