ಕೋಟ : ಶೈಕ್ಷಣಿಕ ಚಟುವಟಿಕೆಯ ಅಂತಿಮ ಹಂತ ಸಮೀಪಿಸುತ್ತಿದೆ, ಶಾಲೆಗಳಲ್ಲಿ ಸರಣಿ ಪರೀಕ್ಷೆಗಳ ಮಾಸವಾಗಿ ನಡೆಯುತ್ತದೆ. ವಿದ್ಯಾರ್ಥಿಗಳು ಪರೀಕ್ಷಾ ತಯಾರಿ ಮತ್ತು ಸಿದ್ಧತೆ ಪ್ರಾರಂಭಗೊಂಡಿದೆ. ಇಡೀ ವರ್ಷ ಅಧ್ಯಯನ ಮಾಡಿದ ಪಠ್ಯಕ್ಕೆ ಪರೀಕ್ಷೆ ಮತ್ತು ಫಲಿತಾಂಶ ಎದುರು ನೋಡುವುದು ಸಾಮಾನ್ಯ. ಪರೀಕ್ಷೆ ಎಂದಾಗ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂತಕ ಸಹಜವಾಗಿ ಇದ್ದೆ ಇರುತ್ತೆ, ಇನ್ನೇನು ಹತ್ತನೆಯ ತರಗತಿಯ ವಾರ್ಷಿಕ ಪರೀಕ್ಷೆಯ ಎದುರಿಸುವ ಮಕ್ಕಳಿಗೆ ಪ್ರಶ್ನೆ ಪತ್ರಿಕೆ ಸ್ವರೂಪ, ಉತ್ತರ ಕ್ರಮ ಆದರಿಸಿ ಗುಣಮಟ್ಟದ ಅಂಕಗಳು ಪಡೆಯಬೇಕೆಂಬ ಪ್ರಯತ್ನ ಸಹಜವಾಗಿರುತ್ತದೆ . ಹಾಗಾಗಿ ಪರೀಕ್ಷಾ ಈ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಗೊಂದಲ, ಚಡಿಪಡಿಕೆ ಇದ್ದೆ ಇರುತ್ತೆ. ಅದಕ್ಕಾಗಿ ಪರೀಕ್ಷೆ ಭಯ ಬೇಡ ಹಬ್ಬವಾಗಿ ಆಚರಣೆಯಾಗುವಂತಿರಬೇಕು ಒತ್ತಡ ಮಾಡಿಕೊಳ್ಳಬಾರದು ಎಂದು ಮಣೂರು ಪಡುಕರೆ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕ-ರಕ್ಷಕ ಸಭೆಯಲ್ಲಿ ಪಡುಕರೆ ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ.ವಿ.ಗಾAವಕಾರ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾ ಮಾತುಗಳನ್ನು ನುಡಿದರು ಸಂಜೆ ಅವಧಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆ ಬೇಟಿ ಮಾಡಿ ಕಲಿಕೆ ಅವಲೋಕನ, ಪರೀಕ್ಷಾ ಮಂಡಳಿ ನೀಡಿದ ಮಾದರಿ ಪ್ರಶ್ನೆಪತ್ರಿಕೆಗೆ ಉತ್ತರ ಬರೆಸುವುದು, ಚಟುವಟಿಕೆ ಆಧಾರಿತ ಕಲಿಕೆ, ಸರಣಿ ಪರೀಕ್ಷೆಗಳು, ಶಿಕ್ಷಕರು ವಿದ್ಯಾರ್ಥಿಗಳನ್ನು ಕಲಿಕೆಗಾಗಿ ದತ್ತು ಸ್ವೀಕಾರ, ವಿಶೇಷ ತರಗತಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗೆಗೆ ಧೈರ್ಯ ತುಂಬಿಸುವುದು, ನಿಧಾನ ಕಲಿಕೆ ಮಕ್ಕಳಿಗೆ ಒಂದಿಷ್ಟು ಟಿಪ್ಸ್, ಪೋಷಕರ ಅಭಿಪ್ರಾಯ ಹೀಗೆ ಮಾಹಿತಿಗಳ ವಿನಿಮಯವನ್ನು ಶಿಕ್ಷಕರಾದ ರಾಜೀವ, ಅನುಪಮ, ಸುವರ್ಣ ವಿ ನಾವಡ, ಹರ್ಷಿತಾ, ಪೂರ್ಣಿಮಾವತಿ, ರಜಿನಿ ಸಭೆಯಲ್ಲಿ ತಿಳಿಸಿದರು. ತದನಂತರ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಸಭೆಯಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ ಕಾಂಚನ್ ಮತ್ತು ಮೋಲುಸ್ತುವಾರಿ ಸಮಿತಿ ಉಪಸ್ಥಿತರಿದ್ದರು. ಹಿರಿಯ ಸಹ ಶಿಕ್ಷಕರಾದ ರಾಮದಾಸ್ ನಾಯಕ್ ಸ್ವಾಗತಿಸಿ ವಿದ್ಯಾರ್ಥಿ ಪೋಷಕರ ಸಭೆಯ ಮಹತ್ವ ತಿಳಿಸಿದರು. ಶಿಕ್ಷಕ ಹೆರಿಯ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಶೋಭಾ ವಂದಿಸಿದರು. ವಿದ್ಯಾರ್ಥಿ ಪೋಷಕರ ಸಭೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಕರು ವಿದ್ಯಾರ್ಥಿಗಳು ಕಾರ್ಯಕ್ರಮದ ಉಪಯೋಗ ಪಡೆದರು.