Home » ಬಲ್ಲಿರೇನಯ್ಯಾ…….ಸರ್ವೀಸ್ ರಸ್ತೆಯ ಗೋಳು
 

ಬಲ್ಲಿರೇನಯ್ಯಾ…….ಸರ್ವೀಸ್ ರಸ್ತೆಯ ಗೋಳು

by Kundapur Xpress
Spread the love

ಕುಂದಾಪುರ : ನಗರದ ರಾಷ್ಟ್ರೀಯ ಹೆದ್ದಾರಿಯಿಂದ ಮೀನು ಮಾರ್ಕೇಟ್‌ ರಸ್ತೆ ಮತ್ತು ಚಿಕ್ಕನ್‌ಸಾಲ್‌ ರಸ್ತೆಯನ್ನು ಸಂಪರ್ಕಿಸುವ ಜೋಗಯ್ಯನ ಕಟ್ಟೆ ರಸ್ತೆ ಬಳಿಯ ಸರ್ವೀಸ್‌ ರಸ್ತೆಯಲ್ಲಿ ದೊಡ್ಡ ಹೊಂಡಗಳು ಬಿದ್ದಿದ್ದು ಈ ಕಳಪೆ ಸರ್ವೀಸ್‌ ರಸ್ತೆಯನ್ನು ಹೇಳುವವರು ಕೇಳುವವರೇ ಇಲ್ಲವಾಗಿದ್ದಾರೆ

ಕಳೆದ 5-6 ವರ್ಷಗಳಿಂದ ಹೊಂಡ ಗುಂಡಿಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಅಪೂರ್ಣಗೊಂಡ ಸರ್ವೀಸ್‌ ರಸ್ತೆಯಲ್ಲಿ ವಾಹನ ಸವಾರರಿಗೆ ಸಂಚರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಈ ಸರ್ವೀಸ್‌ ರಸ್ತೆಯಲ್ಲಿ ಅನೇಕ ದ್ವಿಚಕ್ರ ಸವಾರರು ಆಯಾ ತಪ್ಪಿ ಬಿದ್ದು ಆಸ್ಪತ್ರೆ ಸೇರಿದ ಘಟನೆ ನಡೆದಿದ್ದರೂ ಐ ಆರ್‌ ಬಿ ಅಧಿಕಾರಿಗಳು ಪುರಸಭಾ ಅಧಿಕಾರಿಗಳಿಂದ ಹಿಡಿದು ಸ್ಥಳೀಯ ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ

ಸಮರ್ಪಕವಾದ ಚರಂಡಿಯ ವ್ಯವಸ್ಥೆಯೂ ಇಲ್ಲದೇ ಮಳೆಯ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆ ನಿಲ್ಲುವಂತಾಗಿದೆ ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರವರೆಗೆ ಸಂಚರಿಸುವ ಈ ಸರ್ವೀಸ್‌ ರಸ್ತೆಯ ಮಧ್ಯ ಭಾಗದಲ್ಲಿ ಕೊಳಚೆ ನೀರಿನ ಚೆಂಬರ್‌ ನಿರ್ಮಿಸಿರುವುದು ವಾಹನ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದ್ದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ

ಈ ಸರ್ವೀಸ್‌ ರಸ್ತೆಗೊಂದು ಶಾಶ್ವತ ಪರಿಹಾರವನ್ನು ಕಲ್ಪಿಸಬೇಕೆಂದು ಸ್ಥಳೀಯ ಮುಖಂಡರಾದ ಗಿರೀಶ್‌ ನ್ಯಾಕ್‌ ಮತ್ತು ಮಿತ್ರರು ಆಕ್ರೋಶ ವ್ಯಕ್ತಪಡಿಸಿದ್ದಾರೆ

               ಕೆ ಗಣೇಶ್‌ ಹೆಗ್ಡೆ ಕುಂದಾಪುರ

  

   

Related Articles

error: Content is protected !!