109
ಉಡುಪಿ : ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕೋಟೇಶ್ವರದಿಂದ ಪ್ರಾರಂಭಗೊಂಡು ಹೆಜಮಾಡಿವರೆಗೆ 26 ಕಿ.ಮೀ. ಸರ್ವಿಸ್ ರಸ್ತೆ ಹಾಗೂ ಮೂರು ಫುಟ್ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಹಲವು ಅಪಘಾತಗಳು ಸಂಭವಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66ಕ್ಕೆ ಸಂಬಂಧಿಸಿದಂತೆ, ಕುಂದಾಪುರದಿಂದ ನಂತೂರು ವರೆಗಿನ ಭಾಗದಲ್ಲಿ 12 ಕಡೆಗಳಲ್ಲಿ ಸರ್ವಿಸ್ ರಸ್ತೆ ಹಾಗೂ 6 ಕಡೆಗಳಲ್ಲಿ ಫುಟ್ ಓವರ್ ಬ್ರಿಡ್ಜ್ ಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ ಎಂದು ಸಂಸದ ಕೋಟ ಪ್ರತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

