ಕೋಟ: ಕೋಟದ ಸೇವಾ ಸಂಗಮ ಶಿಶುಮಂದಿರದಲ್ಲಿ ಇಲ್ಲಿ ಡಿ. 11ರಂದು ಗೀತಾ ಜಯಂತಿಯನ್ನು ಆಚರಿಸಲಾಯಿತು. ಒಂದು ವಾರಗಳ ಕಾಲ ನಡೆದ ಶ್ರೀ ಭಗವದ್ಗೀತಾ ಪಠಣದ ನಂತರ ಬುಧವಾರ ಸಮಾರೋಪಗೊಂಡಿತು. ಇದೇ ವೇಳೆ 4 ಅಧ್ಯಾಯಗಳ ಪಠಣ ನಂತರ ಪೂಜೆ ನಡೆಸಿ ಪ್ರಸಾದ ವಿತರಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ, ವ್ಯವಸ್ಥಾಪಕಿ ಭಾಗ್ಯ ವಾದಿರಾಜ್ ಕಾರ್ಯದರ್ಶಿ ಸುಷ್ಮಾ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.