ತೆಕ್ಕಟ್ಟೆ : ಇಲ್ಲಿನ ನವೀಕೃತ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಮತ್ತು ಶೌಚಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಯುತ ಕಿರಣ್ ಕುಮಾರ್ ಕೊಡ್ಗಿ ಹಾಗೂ ಶ್ರೀಮತಿ ಶೋಭನಾ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ತೆಕ್ಕಟ್ಟೆ ಇವರು ಆಗಮಿಸಿದರು ಶ್ರೀ ದಿನೇಶ್ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಿರಣ್ ಕುಮಾರ್ ಕೊಡ್ಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಈ ಶಾಲೆಯಲ್ಲಿ ಗುರುಕುಲ ಮಾದರಿ ಶಿಕ್ಷಣ ಪದ್ಧತಿ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುತ್ತದೆ ಇಂತಹ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ದೇಶದ ಮುಂದಿನ ಉತ್ತಮ ನಾಗರಿಕರಾಗುತ್ತಾರೆ ಹಾಗೂ ಈ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ನಾನು ಸಹ ಕೈಜೋಡಿಸುತ್ತೇನೆ ಎಂದು ಹೇಳಿದರು.
ಹಾಗೂ ಇನ್ನೋರ್ವ ಅತಿಥಿಗಳಾದ ಶ್ರೀ ದಿನೇಶ್ ಕಾಮತ್ ಆಡಳಿತ ಧರ್ಮದರ್ಶಿಗಳು ಪಟ್ಟಾಭಿರಾಮಚಂದ್ರ ದೇವಸ್ಥಾನ ಕೊಟೇಶ್ವರ. ಇವರು ಮಾತನಾಡುತ್ತ ಮಾತೃ ಭೂಮಿ ಜನ್ಮಭೂಮಿ ಮತ್ತು ಕಲಿತ ಶಾಲೆಯನ್ನು ನಾವು ಜೀವನ ಪರ್ಯಂತ ಮರೆಯಬಾರದು ಸಂಸ್ಕಾರಯುತ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಏನೇ ಸಂದರ್ಭ ಬಂದರೂ ಎದುರಿಸುವ ಧೈರ್ಯವನ್ನು ಪಡೆದಿರುತ್ತಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಗುರುರಾಜ್. ರಾಷ್ಟ್ರೀಯ ಸ್ವಯಂಸೇವಕ ಸಮಿತಿಯ ಕುಟುಂಬ ಪ್ರಬೋಧಿನಿ ಮಂಗಳೂರು ವಿಭಾಗ. ಶಾಲಾ ಅಧ್ಯಕ್ಷರು ಶ್ರೀ ಸುರೇಶ್ ಬೆಟ್ಟಿನ್ ಕಾರ್ಯದರ್ಶಿಗಳಾದ ಶ್ರೀ ಕಮಲಾಕ್ಷ ಪೈ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಂಧ್ಯಾ ಭಟ್ ರವರು ಉಪಸಿತರಿದ್ದರು