ತೆಕ್ಕಟ್ಟೆ: ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾ ಗಿರಿ ತೆಕ್ಕಟ್ಟೆಯಲ್ಲಿ ಜ್ಞಾನ ವಿಜ್ಞಾನ, ಗಣಿತ, ಸಂಸ್ಕೃತಿ ಜ್ಞಾನ, ಯೋಗ ಮೇಳ ಕಾರ್ಯಕ್ರಮವನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕ ಸಂಯೋಗದೊಂದಿಗೆ ಆಯೋಜಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಯುತ ಟಿ. ರಮೇಶ್ ನಾಯಕ್ ರವರು ಆರನೇ ತರಗತಿ ವಿದ್ಯಾರ್ಥಿಯಾದ ತನ್ಮಯ್ ಇವನು ತಯಾರಿಸಿದ ಅಲೆಗಳಿಂದ ವಿದ್ಯುತ್ ಶಕ್ತಿ ವಿಜ್ಞಾನ ಮಾದರಿಯನ್ನು ಚಾಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು 10 ವಿದ್ಯಾಭಾರತೀಯ ಶಾಲೆಗಳಿಂದ 252 ಮಂದಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಭಾರತೀ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಯುತ ಪಾಂಡುರಂಗ ಪೈ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಟಿ. ರಮೇಶ್ ನಾಯಕ್, ಜಿಲ್ಲಾ ಕಾರ್ಯದರ್ಶಿಯವರಾದ ಮಹೇಶ್ ಹೈಕಾಡಿ, ಉಡುಪಿ ಜಿಲ್ಲಾ ಘಟಕದ ವಿಜ್ಞಾನ ಪ್ರಮುಖ ಶ್ರೀಮತಿ ಸಂಧ್ಯಾ ಭಟ್, ಯೋಗ ಪ್ರಮುಖ ಸಂಜಯ್, ಸಂಸ್ಕೃತಿ ಜ್ಞಾನ ಪ್ರಮುಖ ಕುಮಾರಿ ಜ್ಯೋತಿ ಎಳ್ಳಾರೆ, ಗಣಿತ ಪ್ರಮುಖ ಶ್ರೀಮತಿ ಜ್ಯೋತಿ ಅಡಿಗ , ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಟಿ. ವಿಷ್ಣುಮೂರ್ತಿ ಭಟ್ ಇವರು ಉಪಸ್ಥಿತರಿದ್ದರು