Home » ತೆಕ್ಕಟ್ಟೆ : ವಿಶ್ವ ಯೋಗ ದಿನಾಚರಣೆ
 

ತೆಕ್ಕಟ್ಟೆ : ವಿಶ್ವ ಯೋಗ ದಿನಾಚರಣೆ

by Kundapur Xpress
Spread the love

ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆ. ಇಲ್ಲಿ ವಿಶ್ವಯೋಗ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೋಟೇಶ್ವರದ ಯೋಗ ತರಬೇತುದಾರರಾದ ಎ.ಬಾಬು ಪೈ ಯವರು ನಮ್ಮ ದೇಹ ವ್ಯಾದಿಗಳಿಂದ ಮುಕ್ತವಾಗಬೇಕಾದರೆ ಸ್ವಸ್ಥ ಆರೋಗ್ಯದೊಂದಿಗೆ ಸುಂದರ ದೇಹ ನಮ್ಮದಾಗಬೇಕಾದರೆ, ನಮ್ಮ ಜೀವನದಲ್ಲಿ ನಮ್ಮ ದೇಹಕ್ಕೆ ಯೋಗಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಕಮಲಾಕ್ಷ ಪೈ, ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ತೆಕ್ಕಟ್ಟೆ ಅನಂತ್ ನಾಯಕ್ ಮತ್ತು ಯೋಗ ತರಬೇತುದಾರರಾದ ಶ್ರೀಮತಿ ರೂಪ ಬಿ ಪೈ, ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ ಉಪಸ್ಥಿತರಿದ್ದರು. ಶೃತಿ ಮಾತಾಜಿ ಸ್ವಾಗತಿಸಿ, ಶಕೀಲಾ ಮಾತಾಜಿ ವಂದಿಸಿದರು ಜಯಲಕ್ಷ್ಮಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!