Home » ಶಾಸ್ತ್ರೀಪಾರ್ಕ್‌ : ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ
 

ಶಾಸ್ತ್ರೀಪಾರ್ಕ್‌ : ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಶಾಂತವಾದ ಶಾಸ್ತ್ರೀಪಾರ್ಕ್‌ ತಳಭಾಗ

by Kundapur Xpress
Spread the love

ಕುಂದಾಪುರ : ಸದಾ ಜಗಳ ಕಿರುಚಾಟ ಹಾಗೂ ಹೊಡೆದಾಟಗಳಿಂದ ಗಿಜಿಗುಡುತ್ತಿದ್ದ ಕುಂದಾಪುರ ನಗರದ ಶಾಸ್ತ್ರೀಪಾರ್ಕ್‌ ಫ್ಲೈ ಓವರ್‌ನ ತಳಭಾಗ ಇಂದು ಶಾಂತ ಸ್ಥಿತಿಗೆ ಮರಳಿದೆ ಇಲ್ಲಿ ಸದಾ ಮಲಗಿ ವಿಶ್ರಾಂತಿ ಪಡೆಯುವ ವಲಸೆ ಕಾರ್ಮಿಕರ ತೆರವು ಕಾರ್ಯಾಚರಣೆ ಯಶಸ್ವಿಯಾಗಿದ್ದು ಪ್ರಮುಖ ರಸ್ತೆಯ ಬದಿಗಳಲ್ಲಿ ಮಲಗುವ ವಲಸೆ ಕಾರ್ಮಿಕರು ಬೇರೆ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ

ಶಾಸ್ತ್ರೀಪಾರ್ಕ್‌ ಫ್ಲೈ ಓವರ್‌ನ ತಳಭಾಗದಲ್ಲಿ ಪೊಲೀಸರ ನಿಯೋಜನೆಯಾಗಿದ್ದು ಮಲಗಲು ಬಂದ ವಲಸೆ ಕಾರ್ಮಿಕರಿಗೆ ಬುದ್ದಿ ಹೇಳಿ ವಾಪಾಸ್ಸು ಕಳಿಸುತ್ತಿದ್ದಾರೆ

ಕುಂದಾಪುರ ನಗರ ಪೊಲೀಸ್‌ ಇಲಾಖೆ ಕುಂದಾಪುರ ಪುರಸಭೆ ಹಾಗೂ ಕಾರ್ಮಿಕ ಇಲಾಖೆಯವರ ಜಂಟಿ  ಕಾರ್ಯಾಚರಣೆಗೆ ಕುಂದಾಪುರದ ನಾಗರಿಕರು ಮೆಚ್ಚುಗೆ ಸೂಚಿಸಿದ್ದಾರೆ

ಸ್ವಚ್ಚ ಭಾರತ್‌ ಹಾಗೂ ಸುಂದರ ಕುಂದಾಪುರಕ್ಕೆ ಶಾಸ್ತ್ರೀಪಾರ್ಕ್‌ ಫ್ಲೈ ಓವರ್‌ನ ತಳಭಾಗ ಮುಕುಟಪ್ರಾಯವಾಗಲಿ ಎಂಬುದೇ ನಮ್ಮ ಹಾರೈಕೆ

ಕೆ. ಗಣೇಶ್‌ ಹೆಗ್ಡೆ

 

Related Articles

error: Content is protected !!