157
ಉಡುಪಿ : ಕನ್ನಡ ಸಿನಿಮಾರಂಗದ ಹಿರಿಯ ನಟ ಶ್ರೀ ರಮೇಶ್ ಭಟ್ ಅವರು ತಾವು ಬರೆದ ಗೀತಾಲೇಖನವನ್ನು ರಾಜಾಂಗಣದಲ್ಲಿ ಪರ್ಯಾಯ ಶ್ರೀಗಳಿಗೆ ಸಮರ್ಪಿಸಿದರು. ಕಿರಿಯ ಶ್ರೀಪಾದರು ಉಪಸ್ಥಿತರಿದ್ದರು
ಪರ್ಯಾಯ ಶ್ರೀಪಾದರು ಎಂಭತ್ತರ ಈ ಪ್ರಾಯದಲ್ಲಿ ರಮೇಶ್ ಭಟ್ ಅವರು ಗೀತೆ ಬರೆದದ್ದು ಬಹಳ ಸಂತೋಷದ ವಿಷಯ , ಚಲನಚಿತ್ರ ರಂಗದವರೂ ಕೂಡಾ ನಮ್ಮ ಕೋಟಿಗೀತಾಲೇಖನ ಯಜ್ಞದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದಂತಾಯಿತು ಎಂದು ತಿಳಿಸಿ ಶ್ರೀ ರಮೇಶ್ ಭಟ್ ದಂಪತಿಗಳಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸಂಮಾನಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

