Home » ಸಂಪನ್ನಗೊಂಡ ಶ್ರೀ ಕುಂದೇಶ್ವರ ಲಕ್ಷ ದೀಪೋತ್ಸವ
 

ಸಂಪನ್ನಗೊಂಡ ಶ್ರೀ ಕುಂದೇಶ್ವರ ಲಕ್ಷ ದೀಪೋತ್ಸವ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಮಧ್ಯಭಾಗದಲ್ಲಿರುವ ಅಧಿದೇವತೆ ಶ್ರೀ ಕುಂದೇಶ್ವರನ ಸನ್ನಿಧಾನದಲ್ಲಿ ಶ್ರೀದೇವರ ಲಕ್ಷ ದೀಪೋತ್ಸವ ಹಾಗೂ ರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು  ಬೆಳಗ್ಗೆ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಶತರುದ್ರಾಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಿತು

ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಕುಂದಾಪುರ ತಾಲೂಕಿನ ಭಜನ ಮಂಡಳಿಗಳ ಒಕ್ಕೂಟದವರಿಂದ ಶ್ರೀ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆಯೊಂದಿಗೆ ಸಂಜೆಯ ವೇಳೆಗೆ ಸಹಸ್ರಾರು ಹಣತೆಗಳನ್ನು ಬೆಳಗುವ ಮೂಲಕ ಲಕ್ಷದೇಪೋತ್ಸವವು ಸಂಪನ್ನಗೊಂಡಿತು

ಕುಂದೇಶ್ವರ ದೇಗುಲವನ್ನು ವಿದ್ಯುತ್ ದೀಪಗಳಿಂದ ವಿಶೇಚವಾಗಿ ಅಲಂಕರಿಸಲಾಗಿದ್ದು ದೀಪೋತ್ಸವಕ್ಕೆ ಊರ-ಪರವೂರ ಸಹಸ್ರಾರು ಮಂದಿ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದು ಕೃತಾರ್ಥರಾಗಿ. ಮಧ್ಯಾಹ್ನ ನಡೆದ ಅನ್ನಸಂತರ್ವಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ನೃತ್ಯ ವಿದುಷಿ ಪ್ರವಿತಾ ಅಶೋಕ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಪ್ರದರ್ಶನಗೊಂಡಿತು.

ಕುಂದೇಶ್ವರ ರಥಬೀದಿಯಲ್ಲಿ ಪ್ರತಿಷ್ಠಾಪಿಸಿದ ಚಿತ್ತಾಕರ್ಷಕವಾದ ಶ್ರೀ  ಮಾರಣಕಟ್ಟೆಯ  ಬ್ರಹ್ಮಲಿಂಗೇಶ್ವರನ  ಮೂರ್ತಿಯು ಜನಮನ ಸೂರೆಗೊಂಡಿತು ಸಹಸ್ರಾರು ಭಕ್ತರು ಶ್ರೀ  ಮಾರಣಕಟ್ಟೆಯ  ಬ್ರಹ್ಮಲಿಂಗೇಶ್ವರ ಮೂರ್ತಿಯ ಜೊತೆ ಸೆಲ್ಪಿ ತೆಗೆಯಲು ಮುಗಿಬಿದ್ದರುಕಳೆದ ವರ್ಷಕ್ಕಿಂತ ಈ ಭಾರಿ ಜನದಟ್ಟಣೆ ಇನ್ನಷ್ಟು ಹೆಚ್ಚಿತ್ತು. ಸಂಜೆ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ಹಾಗೂ ಪುಷ್ಪಕ ರಥದಲ್ಲಿ ಶ್ರೀ ದೇವರ ಪುರಮೆರವಣಿಗೆ ಕಟ್ಟೆ ಪೂಜೆ ಕೆರೆದೀಪ ನೆರವೇರಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ,ಅರ್ಚಕ ವೃಂದ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಿಬಂದಿ ವರ್ಗ ಉಪಸ್ಥಿತರಿದ್ದರು

 

Related Articles

error: Content is protected !!