Home » ಶ್ರೀ ನಟರಾಜ ನೃತ್ಯನಿಕೇತನ : ಇಂದು 31ನೇ ವಾರ್ಷಿಕೋತ್ಸವ
 

ಶ್ರೀ ನಟರಾಜ ನೃತ್ಯನಿಕೇತನ : ಇಂದು 31ನೇ ವಾರ್ಷಿಕೋತ್ಸವ

ಗೆಜ್ಜೆಗಳ ನಿನಾದ - 2025

by Kundapur Xpress
Spread the love

ಸಾಲಿಗ್ರಾಮ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಹಾಗೂ ವಿದುಶಿ ಎಂ ಭಾಗೀರಥಿ ರಾವ್‌ ಸಾರಥ್ಯದಲ್ಲಿ ನಡೆಯುತ್ತಿರುವ ಸಾಲಿಗ್ರಾಮದ ಶ್ರೀ ನಟರಾಜ ನೃತ್ಯನಿಕೇತನ ಇದರ 31ನೇ ವಾರ್ಷಿಕೋತ್ಸವ ಸಮಾರಂಭವು ಇಂದು ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ಸಂಜೆ 5.00 ಕ್ಕೆ ಜರುಗಲಿದೆ

ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾರವರು ವಹಿಸಲಿದ್ದು ದೀಪ ಪ್ರಜ್ವಲನೆಯನ್ನು ನಿವೃತ್ತ ಹಿಂದಿ ಉಪನ್ಯಾಸಕರಾದ ಶ್ರೀ ಶ್ರೀನಿವಾಸ ಹಾಗೂ ಮುಖ್ಯ ಅತಿಥಿಗಳಾಗಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಇದರ ಕಾರ್ಯದರ್ಶಿಗಳಾದ ರಾಜಶೇಖರ್ ಹೆಬ್ಬಾರ್ ಆಗಮಿಸಿದ್ದಾರೆ

ಖ್ಯಾತ ಭರತನಾಟ್ಯ ಕಲಾವಿದರಾದ  ವಿದ್ವಾನ್ ಕೆ ಭವಾನಿ ಶಂಕರ್ ಅಮ್ಮುಂಜೆ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸಮಾರಂಭದಲ್ಲಿ ಸಾಧಕ ಪುರಸ್ಕಾರ ಸಾಧಕ ಶ್ರೀ ಪುರಸ್ಕಾರ ಹಾಗೂ ರಂಗ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಗುವುದು ಎಂದು ನಟರಾಜ ನೃತ್ಯ ನಿಕೇತನ ಇದರ ಸ್ಥಾಪಕರಾದ ಶ್ರೀಮತಿ ಎಂ ಭಾಗೀರಥಿ ರಾವ್‌ ತಿಳಿಸಿದ್ದಾರೆ

 

Related Articles

error: Content is protected !!