Home » ಮಣೂರು-ಸ್ನೇಹಕೂಟ 9ನೇ ವರ್ಷೋತ್ಸವ ಸಂಭ್ರಮ
 

ಮಣೂರು-ಸ್ನೇಹಕೂಟ 9ನೇ ವರ್ಷೋತ್ಸವ ಸಂಭ್ರಮ

ಸಂಘಟನೆ ಕಟ್ಟುವುದು ಸುಲಭ, ಬೆಳೆಸುವುದು ದೊಡ್ಡ ಸವಾಲು - ಅಕ್ಷತಾ ಗಿರೀಶ್

by Kundapur Xpress
Spread the love

ಕೋಟ: ಸಂಘಟನೆ ಕಟ್ಟುವುದು ಸುಲಭ ಆದ್ರೆ ಅದನ್ನು ನಿರಂತವಾಗಿ ಕೊಂಡ್ಯೋಯುವುದು ಸವಾಲಿನ ಕಾರ್ಯ ಎಂದು ಜೆಸಿಐ ಸಂಸ್ಥೆಯ ಅಂತಾರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಅಕ್ಷತಾ ಗಿರೀಶ್ ಹೇಳಿದರು
ಭಾನುವಾರ ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ಮಣೂರು ಸ್ನೇಹಕೂಟದ 9ನೇ ವರ್ಷದ ವಾರ್ಷಿಕೋತ್ಸವವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಅದೇ ರೀತಿ ಸ್ನೇಹಕೂಟ ಎಂಬ ಮಹಿಳಾ ಸಂಘಟನೆ ಸಾಂಸ್ಕ್ರತಿಕ ಸಾಮಾಜಿಕ ಶೈಕ್ಷಕ ಕ್ಷೇತ್ರದಲ್ಲಿ ತನ್ನದೆ ಆದ ಅಸ್ತಿತ್ವ ಇರಿಸಿ ಇದೀಗ ನಿರಂತರ ಚಟುವಟಿಕೆಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.ಸಮಾಜದಲ್ಲಿ ಮಹಿಳೆ ಹೇಗೆ ಮುಂಚೂಣಿಗೆ ನಿಲ್ಲಬೇಕಂಬುವುದನ್ನು ತೋರಿಸಿಕೊಟ್ಟಿವೆ ಇಂಥಹ ಸಂಘ ಸಂಸ್ಥೆಗಳು ಜನಸಾಮಾನ್ಯರ ನಡುವೆ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನೀಡಲಿ ಎಂದು ಆಶಿಸಿದರು.
ಇದೇ ವೇಳೆ ಸ್ನೇಹಕೂಟದ ಸದಸ್ಯರಾದ ಶ್ರೀದೇವಿ ಹಂದೆ,ಶಿವ ಪ್ರಭೆ ಅಲ್ಸೆ,ಅನ್ನಪೂರ್ಣ ಹಂದೆ,ಸಾವಿತ್ರಿ ಮಯ್ಯ ಇವರುಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿವೇತನ,ದಿವಂಗತ ರೇವತಿ ಮಧ್ಯಸ್ಥ ಸ್ಮಾರಕ ನಿಧಿಯನ್ನು ಅಶಕ್ತರಿಗೆ ವಿತರಿಸಲಾಯಿತು.
ಸ್ನೇಹಕೂಟದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತವರಿಗೆ ಬಹುಮಾನವನ್ನು ಸಮಾಜಸೇವಕಿ ಪ್ರೇಮ ಶೆಟ್ಟಿ ವಿತರಿಸಿದರು.
ಮುಖ್ಯ ಅಭ್ಯಾಗತರಾಗಿ ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ನಿವೃತ್ತ ಶಿಕ್ಷಕಿ ಸ್ನೇಹಕೂಟದ ಸದಸ್ಯೆ ಸುವರ್ಣಲತಾ ಉಪಸ್ಥಿತರಿದ್ದರು. ಸಹಸಂಚಾಲಕಿ ವನೀತಾ ಉಪಾಧ್ಯಾ ಸನ್ಮಾನಿತರನ್ನು ಪರಿಚಯಿಸಿದರು.
ಸ್ನೇಹಕೂಟದ ಸಂಚಾಲಕಿ ಭಾರತಿ.ವಿ ಮಯ್ಯ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಸಹಸಂಚಾಲಕಿ ಸುಜಾತ ಬಾಯರಿ,ಸದಸ್ಯೆ ಸ್ಮೀತಾರಾಣಿ ಕಾರ್ಯಕ್ರಮ ನಿರೂಪಿಸಿದರು.ಗಾಯಿತ್ರಿ ಹೊಳ್ಳ ವಂದಿಸಿದರು.ಸಾAಸ್ಕöÈತಿಕ ಕಾರ್ಯಕ್ರಮದ ಭಾಗವಾಗಿ ಜಯಂತಿ ಕೋಟ್ಯಾನ್ ಬಳಗ ಗಾನಗುಂಜನ ಸ್ನೇಹಕೂಟದ ಸದಸ್ಯರಿಂದ ನೃತ್ಯರೂಪಕ ಜರಗಿತು

 

Related Articles

error: Content is protected !!