77
ಉಡುಪಿ : ಕೇಂದ್ರ, ರಾಜ್ಯ ರೈಲ್ವೆ ಖಾತೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣನವರ ಇಂದಿನ ಉಡುಪಿ ಪ್ರವಾಸ ರದ್ದಾಗಿರುತ್ತದೆ.
ಉಡುಪಿ ಇಂದ್ರಾಳಿಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ, ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣ ನಿಲ್ದಾಣಕ್ಕೆ ಭೇಟಿಯಿತ್ತು ಲಯನ್ಸ್ ಕ್ಲಬ್ ಹಂಗಳೂರು ಇವರ ವತಿಯಿಂದ ರೂ. 60.00 ಲಕ್ಷ ಅಂದಾಜು ವೆಚ್ಚದಲ್ಲಿ ನವೀಕರಣಗೊಂಡ ಕುಂದಾಪುರ ರೈಲ್ವೇ ಸ್ಟೇಷನ್ ನ ಪ್ಲಾಟ್ ಫಾರ್ಮ್, ನೂತನ ಛಾವಣಿ ಮತ್ತು ಗಾರ್ಡನ್ನಿನ ಸುಂದರೀಕರಣ ಕಾಮಗಾರಿಗಳ ಬಿಡುಗಡೆಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾನ್ಯ ಸಚಿವರ ಅನಿವಾರ್ಯ ಕಾರ್ಯಕ್ರಮದ ನಿಮಿತ್ತ ಉಡುಪಿ ಪ್ರವಾಸ ರದ್ದಾಗಿದ್ದು ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

