ಕುಂದಾಪುರ : ಜಿಲ್ಲಾಡಳಿತ, ಜಿ.ಪಂ. ಉಡುಪಿ, ಮಹಿಳಾ ಮತ್ತು ಗಳಲ್ಲಿ ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕಾಡಳಿತ, ಕುಂದಾಪುರ ಪುರಸಭೆ, ಬೈಂದೂರು ಪ.ಪಂ., ಯುವ ‘ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿಕ್ಷಣ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ಕುಂದಾಪುರ, ಬೈಂದೂರು ತಾಲೂಕು ಮಟ್ಟದ ವಿಕಲ ಚೇತನರ ಕ್ರೀಡಾಕೂಟ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ಮಾತನಾಡಿ ಯಾರೋಬ್ಬರು ಪರಿಪೂರ್ಣರಲ್ಲ ಪ್ರತಿಯೊಬ್ಬರೂ ಸಹ ಒಂದಿಲೊಂದು ಕೊರತೆಯನ್ನು ಹೊಂದಿರುವವರೇ ಆಗಿದ್ದಾರೆ ಕೆಲವರು ದೈಹಿಕ ನ್ಯೂನತೆ ಹೊಂದಿದ್ದರೆ ಮತ್ತೇ ಕೆಲವರು ಮಾನಸಿಕ ಹೀನತೆ ಹೊಂದಿದ್ದಾರೆ ಅಷ್ಟೇ ವ್ಯತ್ಯಾಸ ಎಂದರು.
ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರತ್ನ ಕುಂದಾಪುರ ತಾಲೋಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧ ಹಾದಿಮನೆ, ಚೈತನ್ಯ ವೃದ್ಧಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಸಿಸಿಲಿ ಕೋಟ್ಯಾನ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್, ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆಯ ಲಲಿತಾ, ಸೂರ್ಯಕಾಂತ್, ಬೈಂದೂರು ಶಿಕ್ಷಣ ಇಲಾಖೆಯ ಚಂದ್ರಶೇಖರ್, ವಿವಿಧೋದ್ದೇಶ ಪುನರ್ ವಸತಿ ಕಾಠ್ಯಕರ್ತ ಮಂಜುನಾಥ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಸವಿತಾ ಸ್ವಾಗತಿಸಿ, ಆಕಾಶ್ ಶೆಟ್ಟಿ ವಂದಿಸಿದರು. ರಾಜಶೇಖರ್ ಹಾಗೂ ಸುರೇಂದ್ರ ನಿರೂಪಿಸಿದರು.