Home » ರಾಜ್ಯ ಮಟ್ಟದ ಪುರಸ್ಕಾರಕ್ಕೆ ಕುಂದಾಪುರದ ಹಕ್ಲಾಡಿ ಗ್ರಾ.ಪಂ. ಆಯ್ಕೆ
 

ರಾಜ್ಯ ಮಟ್ಟದ ಪುರಸ್ಕಾರಕ್ಕೆ ಕುಂದಾಪುರದ ಹಕ್ಲಾಡಿ ಗ್ರಾ.ಪಂ. ಆಯ್ಕೆ

by Kundapur Xpress
Spread the love

ಕುಂದಾಪುರ : ಮಹಾತ್ಮ ಗಾಂಧಿ ಯೋಜನೆಯ ಅನುಷ್ಠಾನದಲ್ಲಿ 2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ್‌ಗಳಿಗೆ ನೀಡಲಾಗುವ ರಾಜ್ಯ ಮಟ್ಟದ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೋಕಿನ ಹಕ್ಲಾಡಿ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.

ಕಳೆದ ಸಾಲಿನಲ್ಲಿ ನರೇಗಾ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಗಳನ್ನು ಗುರುತಿಸಿ, ಫೆ.5 ರಂದು ಬೆಂಗಳೂರಿನ ಅಂಬೇಡ್ಕ‌ರ್ ಭವನದಲ್ಲಿ ನಡೆಯುವ ನರೇಗಾ ಹಬ್ಬ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ‌

ನರೇಗಾದಡಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂದರೆ 25,678 ಮಾನವ ದಿನಗಳ ಸೃಜನೆ, ಉತ್ತಮ ದಾಖಲೆ, ಕಡತಗಳ ನಿರ್ವಹಣೆ, ಉತ್ತಮ ಆಸ್ತಿಗಳ ಸೃಜನೆ, ಅಂತರ್ಜಲ ವೃದ್ಧಿ ಕಾಮಗಾರಿಗಳಿಗೆ ಉತ್ತೇಜನ ಸೇರಿದಂತೆ ಎಲ್ಲ ಕಾರ್ಯಗಳನ್ನು ಗುರುತಿಸಿ, ಈ ಅತ್ಯುತ್ತಮ ಗ್ರಾ.ಪಂ. ಪುರಸ್ಕಾರಕ್ಕೆ ಹಕ್ಲಾಡಿ ಗ್ರಾಮ ಪಂಚಾಯತ್‌ನ್ನು ಆಯ್ಕೆ ಮಾಡಲಾಗಿದೆ.

 

Related Articles

error: Content is protected !!