ಕುಂದಾಪುರ : ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ(14 ವರ್ಷ) ಎಂಬವನು ಶನಿವಾರ ಬೆಳಿಗ್ಗೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತಲ್ಲೂರಿನಲ್ಲಿ ನಡೆದಿದೆ
ತಲ್ಲೂರಿನ ಅರುಣ್ ಕುಮಾರ್ ಶೆಟ್ಟಿ ಹಾಗೂ ಭಾರತೀ ಶೆಟ್ಟಿ ದಂಪತಿಯ ಮಗನಾಗಿರುವ ಈತ ಶನಿವಾರ ಬೆಳಗ್ಗೆ ಮನೆಯಲ್ಲಿ ಉಪಹಾರ ಮುಗಿಸಿ ಶಾಲಾ ವಾಹನ ಹತ್ತಲು ಮನೆಯಿಂದ ಹೊರ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾನೆ ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿಗೆ ದಾಖಲಿಸಲಾಯಿತು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ
ಕಳೆದ ವರ್ಷವಷ್ಟೇ ಇದೇ ವಿದ್ಯಾರ್ಥಿಯ ಅಕ್ಕ ಅನುಶ್ರೀ ಎಂಬವಳು ಇದೇ ಶಾಲೆಯ ಎಂಟನೇ ತರಗತಿಯಲ್ಲಿ ಓದುತ್ತಿರುವಾಗ ಕುಸಿದು ಬಿದ್ದು ಸಾವನಪ್ಪಿದ್ದ ಘಟನೆ ಮಾಸುವ ಮುನ್ನವೇ ಈ ದುರ್ಘಟನೆ ನಡೆದಿದೆ
ಅಕ್ಕ ಗತಿಸಿಹೋದ ಒಂದು ವರ್ಷದ ಒಳಗೆ ಸಹೋದರ ಕೂಡ ಮೃತಪಟ್ಟಿರವುದು ಕುಟುಂಬವನ್ನು ಕೆಂಗೆಡಿಸಿದೆ ವಿದ್ಯಾರ್ಥಿಯ ತಂದೆ ಅರುಣ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ