246
ಉಡುಪಿ:ಆನ್‌ಲೈನ್ ಸಾಲಕ್ಕೆ ಸಂಬಂಧಿಸಿ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎನ್ನಲಾದ ಘಟನೆ ಮಣಿಪಾಲ ಹುಡ್ಕೊ ಕಾಲೋನಿ ಎಂಬಲ್ಲಿ ನಡೆದಿದೆ. ಮೃತರನ್ನು ರಾಘವೆಂದ್ರ ಎ.ಶಾನಭಾಗ್(49) ಎಂದು ಗುರುತಿಸಲಾಗಿದೆ.
ಬಾಳಿಗಾ ಫಿಶ್‌ನೆಟ್ ಆಸಿಸ್ಟೆಂಟ್ ಮೆನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು ಆನ್‌ಲೈನ್‌ನಲ್ಲಿ ಸಾಲ ತೆಗೆದು ಕೊಂಡಿದ್ದರು. ಇದರಿಂದ ಫೋನ್ ಕರೆಗಳು ಬರುತ್ತಿದ್ದು ಈ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣ ದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಹಡಿಯ ಮೇಲೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

