ವಾಷಿಂಗ್ಟನ್ : ಭಾರತೀಯ ಮೂಲದ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್, ಮಂಗಳವಾರ ಮತ್ತೊಮ್ಮೆ ಅಂತಾ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿದ್ದಾರೆ. ಜೊತೆಗೆ ಮಂಗಳ ವಾರ ಅಮೆರಿಕದ ಬೋಯಿಂಗ್ ಕಂಪನಿ ತನ್ನ ಸ್ಟಾರ್‌ಲೈನರ್ ನೌಕೆ ಯನ್ನು ಮೊದಲ ಬಾರಿಗೆ ಉಡ್ಡ ಯನಕ್ಕೆ ಬಳಸುತ್ತಿದೆ ಎಂಬುದು ವಿಶೇಷ.
2006 ಮತ್ತು 2012ರಲ್ಲಿ 2 ಬಾರಿ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಅಲ್ಲಿ ವಿವಿಧ ಸಂಶೋಧನೆ ಕೈಗೊಂಡಿದ್ದ ಸುನಿತಾ, ಇದೀಗ ನಾಸಾ ಮತ್ತೊಂದು ತಂಡದ ಭಾಗವಾಗಿ ತೆರಳುತ್ತಿದ್ದಾರೆ. ಸುನಿತಾ ವಿಲಿಯಮ್ಸ್ ಅವರ ಜತೆ ಇನ್ನೊಬ್ಬ ಗಗನಯಾನಿ ಬುಚ್ ವಿಲ್ ಮೋರ್ ಕೂಡ ಪಯಣಿಸಲಿದ್ದಾರೆ.
ಸುನಿತಾ ಜತೆ ಭಗವದ್ಗೀತೆ ಪುಸ್ತಕ, ಗಣೇಶನ ವಿಗ್ರಹ!
ಬಾಹ್ಯಾಕಾಶ ಯಾನ ಕೈಗೊಳ್ಳುವ ವೇಳೆ ಭಗವದ್ಗೀತೆ ಹಾಗೂ ಗಣೇಶನ ವಿಗ್ರಹವನ್ನು ಸುನಿತಾ ವಿಲಿಯಮ್ಸ್ ಕೊಂಡೊಯ್ಯಲಿದ್ದಾರೆ. ಈ ಮುಂಚಿನ ಅಂತರಿಕ್ಷ ಯಾನದಲ್ಲಿ ಅವರು ಭಗವದ್ಗೀತೆ ಪುಸ್ತಕವನ್ನು ಕೊಂಡೊಯ್ದಿದ್ದರು. ಇದು ವ್ಯಾಪಕ ಮೆಚ್ಚುಗೆಗೆ ಕಾರಣವಾಗಿತ್ತು.