Home » ಸುನಿತಾ ಅಂತರಿಕ್ಷ ಯಾನ ಮೂಂದೂಡಿಕೆ
 

ಸುನಿತಾ ಅಂತರಿಕ್ಷ ಯಾನ ಮೂಂದೂಡಿಕೆ

by Kundapur Xpress
Spread the love

ಫ್ಲೋರಿಡಾ: ಭಾರತೀಯಮೂಲದ ಗಗನಯಾತ್ರಿ ಸುನಿತಾವಿಲಿಯಮ್ ಒಳಗೊಂಡ ನಾಸಾದ ಬಾಹ್ಯಾಕಾಶ ಉಡ್ಡಯನ ಮಂಗಳವಾರ ಕಡೆಯ ಕ್ಷಣದಲ್ಲಿ ರದ್ದಾಗಿದೆ. ಉಡ್ಡಯನಕ್ಕೂ ಕೆಲವೇ ಕ್ಷಣಗಳ ಮೊದಲು ಬೋಯಿಂಗ್ ನೌಕೆ ಹೊತ್ತೊಯ್ಯುತ್ತಿದ್ದ ಅಟ್ಲಾಸ್ ವಿ ರಾಕೆಟ್‌ನ ಆಕ್ಸಿಜನ್ ರಿಲೀಫ್ ವಾಲ್ವನ್ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಉಡ್ಡಯನವನ್ನು ರದ್ದುಗೊಳಿಸಲಾಯಿತು. ಈ ವೇಳೆಗಾಗಲೇ ಸುನಿತಾ ಮತ್ತು ಅವರ ಸಹಯಾತ್ರಿ ಬಚ್ ವಿಲ್ ಮೋರ್ ನೌಕೆ ಏರಿ ಕುಳಿತಿದ್ದರು. ತಾಂತ್ರಿಕ ದೋಷವನ್ನು ಪೂರ್ಣ ವಾಗಿ ಅಧ್ಯಯನ ಮಾಡಲು ಸಮಯ ಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಉಡ್ಡಯನವನ್ನು ಮೇ 10ರ ಈ ಶುಕ್ರವಾರಕ್ಕೆ ಮುಂದೂಡಲಾಗಿದೆ. ನಾಸಾ ಇದೇ ಮೊದಲ ಬಾರಿಗೆ ಬೋಯಿಂಗ್ ನೌಕೆಯನ್ನು ಗಗನ ಯಾನಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊ ಯ್ಯಲು ಬಳಸುತ್ತಿದೆ. ಇದು ಸುನಿತಾ ಅವರ  ಮೂರನೇ ಯಾತ್ರೆಯಾಗಿದೆ.

   

Related Articles

error: Content is protected !!