124
ಕುಂದಾಪುರ : ಗಂಗೊಳ್ಳಿ ಸಮೀಪದ ಹಳೆ ಅಳಿವೆ ಪ್ರದೇಶದ ಕಡಲ ತೀರದಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಪೈಕಿ ಇಬ್ಬರ ಮೃತದೇಹ ನಿನ್ನೆ ಪತ್ತೆಯಾಗಿದ್ದು ಇಂದು ಬೆಳಿಗ್ಗೆ ಮೂರನೇ ಮೃತದೇಹ ಪತ್ತೆಯಾಗಿದೆ
ಇಂದು ಗುರುವಾರ ಬೆಳಿಗ್ಗೆ 6.00 ಗಂಟೆಗೆ ಕೋಡಿ ಸೀವಾಕ್ ಬಳಿಯ ಕಡಲ ತೀರದಲ್ಲಿ ಸುರೇಶ್ ಖಾರ್ವಿ ಮೃತದೇಹ ಪತ್ತೆಯಾಗಿದೆ ಇದರೊಂದಿಗೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಮೃತದೇಹ ಪತ್ತೆಯಾಗಿದೆ
ಜುಲೈ 15ರಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ನಾಲ್ವರು ಮೀನುಗಾರರ ದೋಣಿ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಮಗುಚಿದ್ದು, ನಾಲ್ವರ ಪೈಕಿ ಓರ್ವ ಮೀನುಗಾರ ಈಜಿ ದಡ ಸೇರಿದ್ದರು. ಜಗನ್ನಾಥ ಖಾರ್ವಿ, ಲೋಹಿತ್ ಖಾರ್ವಿ ಮತ್ತು ಸುರೇಶ್ ಖಾರ್ವಿ ನಾಪತ್ತೆಯಾಗಿದ್ದರು

