72
ಕುಂದಾಪುರ : ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಹಾಗೂ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವು ಕುಂದಾಪುರ ತಾಲೂಕು ಪಂಚಾಯಿತಿನ ಸಭಾಂಗಣದಲ್ಲಿ ನಡೆಯಿತು
ಕಿಟ್ ವಿತರಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಗ್ರಾಮೀಣ ಕುಲ ಕಸುಬುದಾರರಿಗೆ ಆರ್ಥಿಕ ನೆರವು ನೀಡಲು ಹಾಗೂ ಸಾಮಾಜಿಕವಾಗಿ ಹಿಂದುಳಿದ ಬಡವರ್ಗದ ಜನರಿಗೆ ಗ್ರಾಮಗಳಲ್ಲಿಯೇ ಜೀವನಾಧಾರ ಕಲ್ಪಿಸಲು ಉಚಿತವಾಗಿ ಇಂದು 133 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ತಾವು ಇದನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಸ್ವಯಂ ಉದ್ಯೋಗವನ್ನು ಮಾಡುವ ಸಲುವಾಗಿ ಈ ಉದ್ದೇಶದಿಂದ ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಹೊಲಿಗೆ ಯಂತ್ರ ವಿಸ್ತರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಉಡುಪಿ ಗ್ರಾಮೀಣ ಕೈಗಾರಿಕಾ ವಿಸ್ತರಣಾ ಅಧಿಕಾರಿ ಮಂಜುನಾಥ್ ಹೆಗಡೆ ಉಪಸ್ಥಿತರಿದ್ದರು.

