258
ದನ ಕಳವು ವಿಫಲ ಯತ್ನ
ಕೊಲ್ಲೂರು: ಶ್ರೀಮೂಕಾಂಬಿಕ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಮುಲಗಿದ ಜಾನುವಾರುಗಳನ್ನು ಕಳವು ಮಾಡಲು ಯತ್ನಸುತ್ತಿರುವುದಾಗಿ ವಿಶ್ವಹಿಂದು ಪರಿಷತ್ತಿನ ಮುಖಂಡನಾದ ಪ್ರವೀಣ್ ಜೋಗಿಯವರಿಗೆ ಬೆಳಿಗ್ಗೆ 1.30 ಕ್ಕೆ ಮಾಹಿತಿ ಸಿಕ್ಕಿದ ತಕ್ಷಣ ಅವರು ಬಜರಂಗದಳದ ಸದಸ್ಯರಾದ ಜಗದೀಶ,ಕಿರಣ್ ಜೋಗಿ,ವಿನೋದ ಸುಧಾಕರ ಮಹೇಶ್ ಹಾಗೂ ಇತರರೊಂದಿಗೆ ಸ್ಥಳಕ್ಕೆ ಬಂದಾಗ ಜಾನುವಾರು ಕಳವಿಗೆ ಬಂದ ಗೋಕಳ್ಳರು ಇವರನ್ನು ನೋಡಿ ಬಿಳಿ ಬಣ್ಣದ ರಿಡ್ಜ್ ಕಾರಿನಲ್ಲಿ ಪರಾರಿಯಾಗಿರುವುದಾಗಿ ವರದಿಯಾಗಿದ್ದು ಕೊಲ್ಲೂರು ಪೋಲೀಸ್ ಠಾಣೆಯಲ್ಲಿ ಪ್ರವೀಣ್ ಜೋಗಿಯವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

