ಉಡುಪಿ :ಮಲ್ಪೆ ಅಯ್ಯಪ್ಪ ಮಂದಿರದ ಬಳಿ ಇರುವ ಶ್ರೀ ಸಿಧ್ಧಿವಿನಾಯಕ ಮೊಬೈಲ್ ಶಾಫ್ ಗೆ ನುಗ್ಗಿದ ಕಳ್ಳರು ಅಂಗಡಿಯ ಶೆಟ್ಟರ್‌ನ್ನು ಮುರಿದು ಅಂಗಡಿಯಲ್ಲಿದ್ದ ನಾನಾ ಕಂಪೆನಿಯ ಮೊಬೈಲನ್ನು ಕಳವು ಮಾಡಿರುವುದಾಗಿ ಅಂಗಡಿಯ ಮಾಲಕ ರಮೇಶ್ ಸುದರ್ಶನ್ ರವರು ಮಲ್ಪೆ ಠಾಣೆಗೆ ದೂರು ನೀಡಿದ್ದಾರೆ ಹಿಂದಿನ ದಿನ ರಾತ್ರಿ ಅಂಗಡಿಗೆ ಬೀಗ ಹಾಕಿ ಹೋಗಿದ್ದು ಮರುದಿನ ಮುಂಜಾನೆ ಮಿತ್ರರಾದ ಶಿವರಾಜ್ ಎಂಬವರು ಅಂಗಡಿಯ ಶೆಟ್ಟರ್ ಮುರಿದ ಬಗ್ಗೆ ಮಾಹಿತಿ ನೀಡಿದ್ದು ಅಂಗಡಿಗೆ ಹೋಗಿ ನೋಡಿದಾಗ ಯಾರೊ ಕಳ್ಳರು ಅಂಗಡಿಯ ಶೆಟ್ಟರ್ ನ್ನು ಮುರಿದು ನಾನಾ ಕಂಪೆನಿಯ ಮೊಬೈಲ್ ಗಳನ್ನು ಕಳವು ಮಾಡಿದ್ದು ಒಟ್ಟು ಮೌಲ್ಯ 1.18.000 ಆಗಿದೆ ಎಂದು ಮಲ್ಪೆ ಠಾಣೆಗೆ ನೀಡಿದ ದೂರಿನಲ್ಲಿ ತೀಳಿಸಲಾಗಿದೆ