ಕುಂದಾಪುರ : ಪ್ರತಿವರ್ಷದಂತೆ ಈ ವರ್ಷವೂ ಕೂಡ ತಿರುಪತಿಯ ಪಾದಯಾತ್ರೆಯು ಸಾಸ್ತಾನದಿಂದ ತಿರುಪತಿಗೆ ತೆರಳಲ್ಲಿದ್ದು ಈ ಬಾರಿ 200ಕ್ಕೂ ಹೆಚ್ಚು ಜನ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಈ 18 ದಿನಗಳ ಪಾದಯಾತ್ರೆಯೂ ಸಾಸ್ತಾನದಿಂದ ಪ್ರಾರಂಭವಾಗಿ ಧರ್ಮಸ್ಥಳ ಗುಂಡ್ಯ ಸಕಲೇಶಪುರ ಹಾಸನ ಚನ್ನರಾಯಪಟ್ಟಣ ಬೆಳ್ಳೂರು ಕ್ರಾಸ್ ನಂದಿ ಗ್ರಾಮ ಕೈವಾರ ಬಾಕ್ರಪೇಟೆ ಶಾಲೆ ಶ್ರೀನಿವಾಸ ಮಂಗಾಪುರ ದಿಂದ ತಿರುಪತಿ ತಲುಪಿ ತಿರುಪತಿ ವೆಂಕಟೇಶ್ವರ ದರ್ಶನವನ್ನು ಪಾದಯಾತ್ರಿ ಭಕ್ತರು ಪಡೆದು ಹಿಂತಿರುಗುತ್ತಾರೆ ಈ ಪಾದಯಾತ್ರೆಯು ಸಾಸ್ತಾನದ ಪಿ ಲಕ್ಷ್ಮೀನಾರಾಯಣ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ