296
ಗಂಗೊಳ್ಳಿ : ಮರವಂತೆ ಬೀಚ್ ಎಲ್ಲಾ ಬೀಚ್ ತರ ಅಲ್ಲ. ಇಲ್ಲಿ ತುಂಬಾ ಆಳವಿದೆ. ಸಮುದ್ರ ತುಂಬಾ ರಫ್ ಇದೆ. ಪ್ರವಾಸಿಗರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ. ಯಾವುದೇ ಕಾರಣಕ್ಕೂ ಸಮುದ್ರದ ನೀರಿಗಿಳಿಯಬಾರದು. ನೀರಿಗಿಳಿದು ಸ್ನಾನ ಮಾಡಬಾರದು, ಸೆಲ್ಪಿ ತೆಗೆದುಕೊಳ್ಳುವ ಸಾಹಸ ಮಾಡಬಾರದು. ಮಳೆಗಾಲದಲ್ಲಿ ಬಂಡೆ ಕಲ್ಲುಗಳಿಗೆ ಪಾಚಿ ಬೆಳೆದು ಜಾರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು. ಪೊಲೀಸ್ ಸಿಬ್ಬಂದಿಗಳ ಸೂಚನೆಯನ್ನು ಪಾಲಿಸಬೇಕು. ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ ನೀರಿಗಿಳಿದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹರೀಶ್ ಆರ್.ನಾಯ್ಕ ತಿಳಿಸಿದ್ದಾರೆ.

