Home » ಭಾರೀ ಗಾತ್ರದ ಮರವೊಂದು : ಕಟ್ಟಡದ ಮೇಲೆ ಬಿದ್ದ ಘಟನೆ
 

ಭಾರೀ ಗಾತ್ರದ ಮರವೊಂದು : ಕಟ್ಟಡದ ಮೇಲೆ ಬಿದ್ದ ಘಟನೆ

by Kundapur Xpress
Spread the love

ಕುಂದಾಪುರ : ಭಾರೀ ಗಾತ್ರದ ಮರವೊಂದು ಹಳೆಯ ತಾಲೂಕು ಕಚೇರಿ ಬಳಿಯ ಅಂಚೆ ಕಚೇರಿ ಇರುವ ಕಟ್ಟಡದ ಮೇಲೆ ಬಿದ್ದ ಘಟನೆ ಕುಂದಾಪುರದಲ್ಲಿ ಸಂಭವಿಸಿದೆ. ಸರಕಾರಿ ರಜೆಯಾಗಿದ್ದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.ಈ ಭಾರೀ ಗಾತ್ರದ ಮರ ಮುರಿದು ಬಿದ್ದಿದೆ. ಆ ಸಮಯದಲ್ಲಿ ಅಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

 

Related Articles

error: Content is protected !!