Categories
ಕರಾವಳಿ ಸುದ್ದಿ

ಪ್ರೋತ್ಸಾಹ ಧನ ವಿತರಣೆ

ಹೆಮ್ಮಾಡಿ ; ಪ್ರಥಮ ಪಿ.ಯು.ಸಿ.ವ್ಯಾಸಾಂಗ ಮಾಡುತ್ತಿರುವ ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಶಶಾಂಕ್ ತೀರ ಬಡತನ ಕುಟುಂಬದ,ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಾನೆ ಹಾಗೇ ಪ್ರಥಮ ಪಿ.ಯು.ಸಿ.ವ್ಯಾಸಾಂಗ ಮಾಡುತ್ತಿರುವ ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ಜನ್ಸಾಲೆಯ ಶೋಭಿತ್ ತೀರ ಬಡತನ ಕುಟುಂಬದ,ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಾನೆ

 ಹೆಮ್ಮಾಡಿಯ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ವತಿಯಿಂದ ಟ್ರಸ್ಟ್‌ ನ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ತಲಾ 25,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದರು ಹಾಗೂ ವಿದ್ಯಾರ್ಥಿಯ ಪಿ.ಯು.ಸಿ ವ್ಯಾಸಂಗದ ಕುರಿತು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು