ಮಂಗಳೂರು : ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಫೌಂಡೇಶನ್ ವಿದ್ಯಾರ್ಥಿಗಳಿಗೆ ಜೂನ್ 20 ರಂದು ಮಂಗಳೂರಿನ ರೋಟರಿ ಬಾಲಭವನ ಸಭಾಂಗಣದಲ್ಲಿ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಅವರು ವಿದ್ಯಾರ್ಥಿಗಳಿಗೆ ಸಿ ಎ ಕೋರ್ಸಿನ ಬಗ್ಗೆ ಮತ್ತು ಪರೀಕ್ಷಾಪೂರ್ವ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಹಾಗೂ ಅತಿಥಿಯಾಗಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ.ನಾರಾಯಣ ಕಾಯರ್ಕಟ್ಟೆ ಅವರು ಸಿ ಎ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಬದ್ಧತೆ, ವೃತ್ತಿಪರತೆಯನ್ನು ಅಳವಡಿಸಿಕೊಳ್ಳಬೇಕು. ತರಗತಿಯ ಮೊದಲ ದಿನದಿಂದಲೇ ಪರೀಕ್ಷಾ ತಯಾರಿಯನ್ನು ನಡೆಸಿದರೆ ಉತ್ತಮ ಶ್ರೇಣಿಯ ಅಂಕಗಳನ್ನು ಗಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಕಾರ್ಯಕ್ರಮದಲ್ಲಿ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರು ಪ್ರೊ.ಮಂಜುನಾಥ ಕಾಮತ್, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರು ಪ್ರೊ.ಸುಪ್ರಭಾ, ತ್ರಿಶಾ ಕ್ಲಾಸಸ್ ಮಂಗಳೂರು ಕೇಂದ್ರದ ಮುಖ್ಯಸ್ಥೆ ಯಶಸ್ವಿನಿ ಯಶ್ ಪಾಲ್, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಧನ್ಯ ಶ್ರೀ ಸ್ವಾಗತಿಸಿ , ನಿರೂಪಿಸಿದರು. ಶಿವಾನಿ ಶೆಣೈ ವಂದಿಸಿದರು.