Home » ತ್ರಿಶಾ ಕಾಲೇಜು ಮಂಗಳೂರು : ಉಚಿತ ರಕ್ತಪರೀಕ್ಷಾ ಶಿಬಿರ
 

ತ್ರಿಶಾ ಕಾಲೇಜು ಮಂಗಳೂರು : ಉಚಿತ ರಕ್ತಪರೀಕ್ಷಾ ಶಿಬಿರ

by Kundapur Xpress
Spread the love

ಮಂಗಳೂರು : ಕಾಲೇಜು ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಯ ಆರೋಗ್ಯ ಸುಧಾರಣೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರಿನಲ್ಲಿ ಉಚಿತ ರಕ್ತಪರೀಕ್ಷಾ ಶಿಬಿರವನ್ನು ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಶಿಬಿರದ ಉದ್ದೇಶ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಮೊಟ್ಟಮೊದಲ ಹಂತದಲ್ಲೇ ರಕ್ತ ಸಂಬಂಧಿತ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಎಂದು  ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ ಕಾಮತ್ ಅವರು ತಿಳಿಸಿದರು

ಶಿಬಿರದಲ್ಲಿ ಹಿಮೋಗ್ಲೋಬಿನ್, ಶುಗರ್, ಬಿಪಿ, ಮತ್ತು ಇತರ ಮೂಲಭೂತ ಪರೀಕ್ಷೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಇಂತಹ ಆರೋಗ್ಯ ಶಿಬಿರಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ನಡೆಯಲಿ ಎಂಬ ಆಶಯವನ್ನು ಕಾಲೇಜಿನ ಆಡಳಿತ ಮಂಡಳಿ ವ್ಯಕ್ತಪಡಿಸಿದೆ.

 

 

Related Articles

error: Content is protected !!