Home » ವಾಣಿಜ್ಯ ವೃತ್ತಿಪರ ವಿದ್ಯಾರ್ಥಿಗಳ ವಿಶೇಷ ಅಧಿವೇಶನ
 

ವಾಣಿಜ್ಯ ವೃತ್ತಿಪರ ವಿದ್ಯಾರ್ಥಿಗಳ ವಿಶೇಷ ಅಧಿವೇಶನ

ಜ್ಞಾನ ಮಂಥನ

by Kundapur Xpress
Spread the love

ಮಣಿಪಾಲ :  ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಸಿದ್ಧಾಂತ್ ಫೌಂಡೇಶನ್ (ರಿ.) ಹಾಗೂ ಸಹ ಪ್ರಾಯೋಜಕತ್ವದಲ್ಲಿ, ತ್ರಿಶಾ ಸಮೂಹ ಸಂಸ್ಥೆಗಳು ವೃತ್ತಿಪರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ “ಜ್ಞಾನ ಮಂಥನ” ಎನ್ನುವ ವಿಶೇಷ ಅಧಿವೇಶನವು ಫೆಬ್ರವರಿ 18 ಆದಿತ್ಯವಾರದಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ರಜತಾದ್ರಿ, ಮಣಿಪಾಲ್ ಇಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅದ್ವಿತ್ ಐ.ಟೆಕ್. ಸಂಸ್ಥಾಪಕರಾದ ಸಿ.ಎ ಕೃಷ್ಣ ಉಪಾಧ್ಯಾಯ ಮಾತನಾಡಿ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯು, ತಂತ್ರಜ್ಞಾನಗಳೊಂದಿಗೆ ಒಗ್ಗಿಕೊಂಡಾಗ ಮಾತ್ರ ಹೊಸತನವನ್ನು ಕಾಣಲು ಸಾದ್ಯ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿ.ಎ ಗೋಪಾಲ ಕೃಷ್ಣ ಭಟ್ ಮಾತನಾಡುತ್ತಾ ಉದ್ಯೋಗ ಅವಾಕಾಶಗಳು ಜಾಗತಿಕವಾಗಿ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿರುವಾಗ ವಿದ್ಯಾರ್ಥಿಗಳು ಕೂಡಾ ತಮ್ಮ ಅವಕಾಶಗಳ ಬಗ್ಗೆ,ನೂತನ ಕಲಿಕೆಗಳ ಬಗ್ಗೆ ಮುತುವರ್ಜಿ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ್ ಕಾಯರಕಟ್ಟೆ, ತ್ರಿಶಾ ವಿದ್ಯಾ ಕಾಲೇಜ್ ಆಪ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ನಾರಾಯಣ ರಾವ್ ಉಪಸ್ಥಿತರಿದ್ದರು. ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗುರುಪ್ರಸಾದ್ ರಾವ್ ನೆರೆದ ಎಲ್ಲರನ್ನೂ ಸ್ವಾಗತಿಸಿದರು

ಕಾರ್ಯಕ್ರಮದಲ್ಲಿ :
• ವೃತ್ತಿಪರರೊಂದಿಗೆ ಸಂವಾದ
• ಪೇಪರ್ ಪ್ರೆಸೆಂಟೇಷನ್
• ಮೋಟಿವೇಶನ್
• ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ಹೊಸತಾಗಿ ವಿಭಿನ್ನ ರೀತಿಯಲ್ಲಿ ಆಯೋಜನೆಯಾದ ಕಾರ್ಯಕ್ರಮದಲ್ಲಿ 800 ಕ್ಕೂ ಮೀರಿ ಉಡುಪಿ ಹಾಗೂ ಮಂಗಳೂರಿನ ವಿದ್ಯಾರ್ಥಿಗಳು ಭಾಗವಹಿಸಿದರು. ತ್ರಿಶಾ ಕಾಲೇಜಿನ ವಿದ್ಯಾರ್ಥಿನಿ ಶಾನಲ್ ಡಿಸೋಜ ವೇದಿಕೆ ಕಾರ್ಯಕ್ರಮವನ್ನು, ಟೆಕ್ನಿಕಲ್ ಸೆಶನ್ ಗಳನ್ನು ನಿಶಿತಾ ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಮೀಕ್ಷಾ ನಿರೂಪಿಸಿ ವಂದಿಸಿದರು

   

Related Articles

error: Content is protected !!