Home » ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ
 

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

 ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜು

by Kundapur Xpress
Spread the love

ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಪಿಯು ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಜೂನ್ 15 ರಂದು ಶ್ರೀ ನಾರಾಯಣ ಗುರು ಸಭಾಭವನ, ವಿಶ್ವನಾಥ ಕ್ಷೇತ್ರ, ಕಟಪಾಡಿಯಲ್ಲಿ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಅವರು ಇಷ್ಟ ಪಟ್ಟು ಮಾಡಿದರೆ ಯಾವ ಕೆಲಸವೂ ಕಠಿಣವಲ್ಲ, ಗುರಿಯ ಸ್ಪಷ್ಟತೆ ಇದ್ದಾಗ ಮಾತ್ರ ಸಾಗುವ ಗುರಿಯು ನಿಖರವಾಗಿರುತ್ತದೆ. ಕನಸುಗಳು ಇದ್ದಾಗ ಮಾತ್ರ ಪ್ರಸ್ತುತ ಜಗತ್ತಿನಲ್ಲಿ ಜೀವಂತವಾಗಿರುತ್ತೀರ, ವಿದ್ಯಾರ್ಥಿಯು ಕನಸುಗಳ ಜೊತೆ, ದೃಡ ನಿರ್ಧಾರದಿಂದ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ಸಾಧ್ಯವಾಗಬಹುದು, ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಪಿಯುಸಿ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಅವರು ಮಾತನಾಡುತ್ತಾ, ಅಂಕಗಳಿಕೆಯ ಜೊತೆಗೆ ಮೌಲ್ಯಗಳು ವಿದ್ಯಾರ್ಥಿಗಳಿಗೆ ಜೊತೆಯಾಗಬೇಕು, ಪ್ರತಿದಿನದ ಅಭ್ಯಾಸಗಳು ಮಾತ್ರ ಉತ್ತಮ ಅಂಕವನ್ನು ತರಬಲ್ಲದು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಸಿದ್ಧಾಂತ್ ಪೌಂಡೇಶನ್ ನ ಟ್ರಸ್ಟಿಯಾದ ನಮಿತಾ ಜಿ ಭಟ್ ಸಂಸ್ಥೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಪ್ರಾಧ್ಯಾಪಕರಾದ  ಪ್ರೊ. ಧೀರಜ್‌ಬೆಳ್ಳಾರೆ ಅವರು ಸ್ವಾಗತಿಸಿ  ನಿರೂಪಿಸಿದರು.

 

Related Articles

error: Content is protected !!