ಕುಂದಾಪುರ : ಈ ವರ್ಷ ಅಧಿಕ ಮಾಸ( ಪುರುಷೋತ್ತಮ ಮಾಸ) ಬಂದಿರುವ ಕಾರಣ ಕ್ಯಾಲೆಂಡರು ಹಾಗೂ ಪಂಚಾಂಗ ಮುದ್ರಣದಲ್ಲಿ ಜುಲೈ 17 ರಂದು ಮರವಂತೆ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಎಂದು ತಪ್ಪಾಗಿ ನಮೂದಾಗಿದೆ.ಇದು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ತಪ್ಪಾಗಿ ಮುದ್ರಣವಾಗಿರುತ್ತದೆ ಎಂದು ದೇವಸ್ಥಾನದ ವ್ಯವಸ್ಥಾಪನ ಆಡಳಿತ ಸಮಿತಿಯ ಅಧ್ಯಕ್ಷ ಸತೀಶ್ ಎಂ. ನಾಯ್ಕ್ ತಿಳಿಸಿದ್ದಾರೆ
ಉಡುಪಿ ಜಿಲ್ಲೆಯ ಬೈಂದೂರು ತಾಲೋಕಿನ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಮರವಂತೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನ.ವರ್ಷಂಪ್ರತಿ ಇಲ್ಲಿ ಆಚರಿಸಿಕೊಂಡು ಬರುತ್ತಿರುವ ಕರ್ಕಾಟಕ ಮಾಸದಲ್ಲಿ ಜರಗುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಬಹಳ ವಿಶೇಷ.ಅದರಲ್ಲೂ ಮದುವೆಯಾಗಿ ಪ್ರಥಮ ವರ್ಷದಲ್ಲಿ ದೇವಸ್ಥಾನಕ್ಕೆ ಆಗಮಿಸುವ ಮದುಮಕ್ಕಳಿಗೆ ಸಮುದ್ರ ಸ್ನಾನ ಮತ್ತು ಹೊಳೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸುವುದು ಇಲ್ಲಿನ ನಂಬಿಕೆ.
ಈ ವರ್ಷದಲ್ಲಿ ಅಗಸ್ಟ್ 16 ರಂದು ಜಾತ್ರಾ ಮಹೋತ್ಸವವು ಜರಗಿಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಸತೀಶ್ ಎಂ. ನಾಯ್ಕ್ ತಿಳಿಸಿದ್ದಾರೆ.ಇದಕ್ಕೆ ಭಕ್ತಾದಿಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ
ವರದಿ : ಈಶ್ವರ್ ಸಿ ನಾವುಂದ