Home » ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ
 

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

by Kundapur Xpress
Spread the love

ಹೆಬ್ರಿ : ವಿದ್ಯಾರ್ಥಿಗಳಿಗೆ ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳಬೇಕು . ವಿದ್ಯಾರ್ಥಿಗಳು ಪರಿಶ್ರಮ ಛಲದ ಮೂಲಕ ತಮ್ಮೊಳಗೆ ಇರುವಂತ ಪ್ರತಿಭೆಯನ್ನು ಹೊರಹಾಕಲು ಚಿಂತನೆ ಮಾಡಬೇಕು .ನಾವು ಯಾವುದಾದರೂ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡುವಂತ ಸಾಧಕರ ಸಾಲಿನಲ್ಲಿ ನಿಲ್ಲುವಂತಹ  ಪೋಷಕರು , ಗುರುಗಳು ಹೆಮ್ಮೆ ಪಡುವಂತಹ ಸಾಧನೆ ಮಾಡಬೇಕು ಎಂದು ಪಾಂಡುರಂಗ ರಮಣ ನಾಯಕ್ ನುಡಿದರು.
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರು ಶೈಲೇಶ್ ಕಿಣಿ ಅಧ್ಯಕ್ಷತೆ ವಹಿಸಿದ್ದರು

ಅಮೃತ ಭಾರತಿ ವಿದ್ಯಾಕೇಂದ್ರದ ಹೈಸ್ಕೂಲ್ ವಿಭಾಗದ ಹತ್ತನೇ ತರಗತಿ ವಿದ್ಯಾರ್ಥಿ ,ಶ್ರೀರಾಮ್ ಬಡಾಜೆ , ಇನೋವೇಟಿವ್ ಇನ್ ಮ್ಯಾಸ್ ಮಾಡೆಲ್ ರಾಷ್ಟ್ರಮಟ್ಟದ ಗಣಿತ ಮೇಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು , ವಿದ್ಯಾಲಯದ ವಿದ್ಯಾರ್ಥಿಗಳಾದ ಪ್ರೀತಮ್ ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಸೈನ್ಸ್ ಮಾಡೆಲ್ ಬೆಸ್ಡ್ ಆನ್ ಸೆನ್ಸರ್ ವಿಷಯದಲ್ಲಿ ಸ್ಪರ್ಧಿಸಿ ದ್ವಿತೀಯ ಬಹುಮಾನವನ್ನು ಮತ್ತು ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ನಿತೀಶ್ ಕುಮಾರ್ ಸ್ಪರ್ಧಿಸಿ ದ್ವಿತೀಯ ಸ್ಥಾನ ಗಳಿಸಿದನು . ಇವರಿಗೆ ಅಮೃತ ಭಾರತಿ ಟ್ರಸ್ಟ್ ಅನ್ನಪೂರ್ಣ ಸಭಾಗೃಹದಲ್ಲಿ ಸನ್ಮಾನಿಸಿದೆ. ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಆಯೋಜಿಸಿದ ರಾಷ್ಟ್ರಮಟ್ಟದ ಸ್ಪರ್ಧೆ ಇದಾಗಿದೆ.
ಅಮೃತ ಭಾರತಿ ಅನ್ನಪೂರ್ಣ ಸಭಾಗೃಹ ದಲ್ಲಿ ನಡೆದ ವಿಜೇತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರು ಶೈಲೇಶ್ ಕಿಣಿ ಸನ್ಮಾನಿಸಿದರು.ವೇದಿಕೆಯಲ್ಲಿ ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತಾವಿಕ ಮಾತುಗಳ ನ್ನಾಡಿ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು .
ಸಂಸ್ಥೆಯ ಪ್ರಾಂಶುಪಾಲರು ಶ್ರೀ ಅರುಣ್ ಎಚ್ . ವೈ . ವಿದ್ಯಾಕೇಂದ್ರದ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಕುಮಾರಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ ಉಪಸ್ಥಿತರಿದ್ದರು .
ಅಭಿನಂದನಾ ಪತ್ರವನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಸಂಸ್ಕೃತ ಪ್ರಮುಖ್ ವೇದವ್ಯಾಸ ತಂತ್ರಿ ವಾಚಿಸಿದರು ಸ್ವಾಗತ ಶ್ರೀಮತಿ ಪ್ರೀತಿ ಶೆಟ್ಟಿ ನಿರೂಪಣೆ ಶ್ರೀಮತಿ ಪ್ರೀತಿ ಬಿ.ಕೆ ನಿರೂಪಿಸಿ ಶ್ರೀಮತಿ ಜ್ಯೋತಿ ವಂದಿಸಿದರು.ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

   

Related Articles

error: Content is protected !!