325
ಕುಂದಾಪುರ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ 40 ಜನ ಋತ್ವಿಜರಿಂದ ಸಹಸ್ರಾವರ್ಥನ ಗಣಪತಿ ಉಪನಿಷತನ್ನು ಸ್ವರ್ಣ ಕಲಶದಲ್ಲಿ ಅಭಿಮಂತ್ರಿಸಿ ಅಭಿಷೇಕ ನಡೆಯಿತು. ವರ್ಷಂಪ್ರತಿ ಶ್ರಾವಣ ಶುಕ್ಲ ಪಕ್ಷದ ಹುಣ್ಣುಮೆಯಂದು ನಡೆಯುವ ಈ ಅಭಿಷೇಕದಲ್ಲಿ ಊರ ಪರವೂರಿನ ಅನೇಕ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ತಂದ ಬೋಂಡದ ಅಭಿಷೇಕ ಕೂಡ ನಡೆಯಿತು.
ಲೋಕ ಕಲ್ಯಾಣಾರ್ಥವಾಗಿ ನಡೆಯವ ಈ ಸೇವೆಯು ಸಮಸ್ತ ಭಕ್ತರಿಗೆ ಆಯುರಾರೋಗ್ಯಾನಂದೈಷ್ವರ್ಯ ಕೊಟ್ಟು ದೇಶದೆಲ್ಲೆಡೆ ಸುಖ ಶಾಂತಿ ನೆಮ್ಮದಿ ಸಕಾಲದಲ್ಲಿ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಆಡಳಿತ ಮೊಕ್ತೇಸರರಾದ ಶ್ರೀ ಶ್ರೀ ರಮಣ ಉಪಾಧ್ಯಾಯರು ತಿಳಿಸಿದರು. ಪರ್ಯಾಯ ಅರ್ಚಕ ಕೆ ಶ್ರೀಷ ಉಪಾಧ್ಯಾಯ ಹಾಗೂ ಸಹೋದರರು ಮತ್ತು ಅರ್ಚಕ ಮಂಡಳಿಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

