Home » ಕಡಲ ಕಿನಾರೆಯಲ್ಲಿ‌‌ ಮೊಳಗಿತು ವಿಷ್ಣು ಸಹಸ್ರನಾಮ ಪಠಣ
 

ಕಡಲ ಕಿನಾರೆಯಲ್ಲಿ‌‌ ಮೊಳಗಿತು ವಿಷ್ಣು ಸಹಸ್ರನಾಮ ಪಠಣ

ಲೋಕದ ಹಿತಕ್ಕೆ ವಿಷ್ಣು ಸಹಸ್ರನಾಮ ಪರಿಣಾಮಕಾರಿ- ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್

by Kundapur Xpress
Spread the love

ಕೋಟ : ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪರಿಣಾಮಕಾರಿ ಎಂದು ಗೀತಾನಂದ ಫೌಂಡೇಶನ್ ವಿಶ್ವಸ್ಥರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಹೇಳಿದರು.

ಭಾನುವಾರ ಇಲ್ಲಿನ ಕೋಟ ಮಣೂರು ಪಡುಕರೆ ಸಮುದ್ರ ತಟದಲ್ಲಿ ಪ್ರಸ್ತುತ ದಿನಗಳಲ್ಲಿ ಪ್ರಾಕೃತಿಕ ಅಸಮತೋಲನ ನಿವಾರಿಸುವ ಅಥವಾ ಸುನಾಮಿ ಸೇರಿದಂತೆ ವಿವಿಧ ತರಹದ ಪ್ರಕೃತಿ ಹಾನಿ ತಪ್ಪಿಸುವ ಉದ್ದೇಶದಿಂದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇಗುಲ ಹಮ್ಮಿಕೊಂಡ ಕಾಸರಗೋಡಿನ ಕಣ್ಣೂರಿನಿಂದ ಬೈಂದೂರಿನ ಶಿರೂರು ಕಡಲ ಕಿನಾರೆಯವರೆಗೆ ವಿವಿಧ ಭಾಗಗಳ ನೂರ ಎಂಟು ವ್ಯಾಪ್ತಿಯಲ್ಲಿ‌ ನೂರ ಎಂಟು ಜನಸಮುದಾಯದಿಂದ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ಕೋಟದ ಪಂಚವರ್ಣ ಸಂಘಟನೆ ,ಸ್ನೇಹಕೂಟ ಮಣೂರು,ಕೇಶವ ಶಿಶು ಮಂದಿರ. ಮೂಡುಗಿಳಿಯಾರು,ಹಂದಟ್ಟು ಮಹಿಳಾ ಬಳಗ ಸಂಯೋಜನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಪ್ರಕೃತಿ ವಿಕೋಪ ತಡೆ, ಧರ್ಮ ಜಾಗೃತಿ,ಪರಿಸರಸಂರಕ್ಷಣೆ ಈ ಪಠಣದಿಂದ ವೃದ್ಧಿಯಾಗುತ್ತದೆ,ಮನುಕುಲದ ಒಳಿತಿಗೆ ಧಾರ್ಮಿಕ ಕೈಂಕರ್ಯ ಹೆಚ್ಚಿನ ಶಕ್ತಿ ನೀಡಲಿದೆ ಇಂಥಹ ಕಾರ್ಯಗಳು ಜಗದಗಲ ಪಸರಿಸಿಕೊಳ್ಳಲಿ ಎಂದು ಹಾರೈಸಿದರು

ಪ್ರಾರಂಭದಲ್ಲಿ ಸಮುದ್ರ ತಟದಲ್ಲಿ ಕೇಶವ ಶಿಶುಮಂದಿರದ ಅಧ್ಯಕ್ಷ ಕೃಷ್ಣ ಹಂದೆ ಅರಸಿನ ಕುಂಕುಮ ಹಾಗೂ ಹಾಲು ಎರೆದು ಮಂತ್ರ ಪಠಿಸಿ ಸಮುದ್ರ ಪೂಜೆ ನೆರವೇರಿಸಲಾಯಿತು.
ಒಟ್ಟು ಆರು ಬಾರಿ ವಿಷ್ಣು ಸಹಸ್ರನಾಮವನ್ನು ಇನ್ನೂರಕ್ಕೂ ಅಧಿಕ ಮಂದಿ ಸಮುದ್ರತಟ್ಟದಲ್ಲಿ ಕುಳಿತು ಪಠಿಸಿದರು.
ಈ ಸಂದರ್ಭದಲ್ಲಿ ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ.ಮಯ್ಯ, ಮಾರ್ಗದರ್ಶಕರಾದ ವಿಷ್ಣುಮೂರ್ತಿ ಮಯ್ಯ, ಕೋಟ ಪಂಚಾಯತ್ ಸದಸ್ಯರಾದ ಪ್ರದೀಪ್ ಸಾಲಿಯಾನ್,ಶೇಖರ್ ಗಿಳಿಯಾರು

ಕೇಶವ ಶಿಶುಮಂದಿದ ಮಾತಾಜಿ ಗಿರೀಜಾ ಪೂಜಾರಿ,ಸಾಮಾಜಿಕ ಕಾರ್ಯಕರ್ತ ದಿನೇಶ್ ಗಪಂಚವರ್ಣಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣ ಭಜನಾ ಮಂಡಳಿಯ ಸಂಚಾಲಕಿ ಗೀತಾ ಪೂಜಾರಿ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ,ಸ್ಥಾಪಕಾಧ್ಯಕ್ಷೆ ಪುಷ್ಭಾ ಹಂದಟ್ಟು, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಕರ್ತ ರವೀಂದ್ರ ಕೋಟ ನಿರೂಪಿಸಿದರು.

ವಿಶೇಷತೆ..
ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮ ಕೋಡಿ ತಲೆ ,ಕೋಡಿ ಕನ್ಯಾಣ,ಪಾರಂಪಳ್ಳಿ ಪಡುಕರೆ,ಕೋಟತಟ್ಟು ಪಡುಕರೆ,ಮಣೂರು ಪಡುಕರೆ,ಮಣೂರು ಜಟ್ಟಿಗೇಶ್ಚರ, ಕೊಮೆ ,ಕೊರವಡಿ ಹೀಗೆ ಜಿಲ್ಲೆಯ ವಿವಿಧ ಸಮುದ್ರ ತಟದಲ್ಲಿ ವಿವಿಧ ಸಂಘಟನೆಗಳು ಸಂಜೆ 4ರಿಂದ 6ಗ ವರೆಗೆ ವಿಷ್ಣು ಸಹಸ್ರನಾಮ ಪಠಣ ಹಮ್ಮಿಕೊಂಡಿತು.250ಕ್ಕೂ ಅಧಿಕ ಮಂದಿ ಭಾಗಿಯಾದರು.

 

Related Articles

error: Content is protected !!