ಕೋಟ : ಪ್ರಸ್ತುತ ದಿನಗಳಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಸರಿದೂಗಿಸಲು ಪರಿಸರ ಸಂರಕ್ಷಗಳಲ್ಲದೆ ಧಾರ್ಮಿಕ ಕೈಂಕರ್ಯದಿAದಲೂ ಸಾಧ್ಯವಿದೆ ಈ ದಿಸೆಯಲ್ಲಿ ವಿಷ್ಣುಸಹಸ್ರನಾಮ ಸಂಕೀರ್ತನೆ ವಿಶೇಷವಾಗಿ ಫಲ ನೀಡಲಿದೆ ಎಂದು ಕೋಟದ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಅಭಿಪ್ರಾಯಪಟ್ಟರು. ಇತ್ತೀಚಿಗೆ ಕೋಟದ ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡ ಹಾಗೂ ಸ್ನೇಹಕೂಟ ಇವರ ಜಂಟಿ ಆಶ್ರಯದಲ್ಲಿ ಇದೇ ಬರುವ ಜನವರಿ 26ರಂದು ಲೋಕಕಲ್ಯಾಣಾರ್ಥ ಪ್ರಾಕೃತಿಕ ವಿಕೋಪ ತಡೆಗಾಗಿ ಕಾಸಗೂಡಿನಿಂದ ಬೈಂದೂರಿನ ಶಿರೂರಿನ ತನಕ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇಗುಲದ ಸಮಿತಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪಠಣದ ಅಭಿಯಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಧಾರ್ಮಿಕ ಆಚರಣೆಗಳು ತನ್ನದೆ ಆದ ಶಕ್ತಿಯನ್ನು ಈ ಜಗತ್ತಿನಲ್ಲಿ ಪಸರಿಸಿಕೊಂಡಿದೆ.ಈ ಹಿನ್ನಲ್ಲೆಯಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗೆ ಪ್ರಕೃತಿಯೇ ಮುನಿಸಿಕೊಂಡಿದೆ ಇದಕ್ಕಾಗಿ ವಿಷ್ಣು ಸಹಸ್ರನಾಮ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು. ಸ್ನೇಹಕೂಟದ ಸಂಚಾಲಕಿ ಭಾರತಿ.ವಿ.ಮಯ್ಯ ಪ್ರಾಸ್ತಾವಿಕ ಮಾತನಾಡಿ ಮೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುವ ಈ ವಿಷ್ಣುಸಹಸ್ರನಾಮ ಅಭಿಯಾನ ಈ ಭಾಗದಲ್ಲೂ ತನ್ನದೆ ಆದ ವೈಶಿಷ್ಟ್ಯತೆಯನ್ನು ಪಡೆದುಕೊಳ್ಳಲಿದೆ ಎಂದು ಗಣ್ಯರನ್ನು ಸ್ವಾಗತಿಸಿದರು. ವಿಷ್ಣು ಸಹಸ್ರನಾಮ ಅಭಿಯಾನದ ಉಡುಪಿ ಜಿಲ್ಲಾ ಸಂಯೋಜಕಿ ಶ್ರೀಮತಿ ರಶ್ಮಿರಾಜ್ ಕುಂದಾಪುರ ಮೂರು ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಸಹಸ್ರನಾಮದ ಪುಸ್ತಕ ವಿತರಿಸಿ ಅದರ ಮಹತ್ವವನ್ನು ವಿವರಿಸಿದರು. ಸಭೆಯಲ್ಲಿ ಸ್ನೇಹಕೂಟದ ಮಾರ್ಗದರ್ಶಕರಾದ ವಿಷ್ಣುಮೂರ್ತಿ ಮಯ್ಯ,ಮಣೂರು ಮಹಾಲಿಂಗೇಶ್ವರ ಸಭಾಭವನದ ಅಧ್ಯಕ್ಷ ರಾಜೇಂದ್ರ ಉರಾಳ,ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಗೀತಾ ಪೂಜಾರಿ ಹಾಡಿಕೆರೆ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ನೂತನ ಅಧ್ಯಕ್ಷ ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘಟಕಿ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.ಕಾರ್ಯಕ್ರಮವನ್ನು ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು